ಹಾಸನ,ಜೂ,17,2020(www.justkannada.in): ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 5 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾಹಿತಿ ನೀಡಿದರು.
ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಗೋಪಾಲಯ್ಯ, ಹಾಸನ ಜಿಲ್ಲೆಯಲ್ಲಿ ಇಂದು 5 ಪ್ರಕರಣ ಹೊಸದಾಗಿ ಪತ್ತೆಯಾಗಿದೆ, ಜಿಲ್ಲೆಯಲ್ಲಿ ಒಟ್ಟು 249 ಕರೋನಾ ಪ್ರಕರಣ ದಾಖಲಾಗಿದೆ, ಈ ಪೈಕಿ 192 ಮಂದಿ ಡಿಸ್ಚಾರ್ಜ್ ಆಗಿದ್ದು 57 ಕೇಸ್ ಆಕ್ಟೀವ್ ಆಗಿವೆ ಎಂದು ತಿಳಿಸಿದರು.
ಭೂಸ್ವಾಧೀನ ಕಾಯ್ದೆ ಜಾರಿ ಮಾಡಲು ಸರ್ಕಾರ ಮುಂದಾಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಗೋಪಾಲಯ್ಯ, ಸಿಎಂ ಜೊತೆ ಈಗಾಗಲೇ ವಿಪಕ್ಷಗಳ ಸಭೆ ಮಾಡಿದ್ದಾರೆ, ಸಿಎಂ ಈ ಬಗ್ಗೆ ಮಾತನಾಡುತ್ತಾರೆ ನಾನು ಚಿಕ್ಕವನು ಈ ಬಗ್ಗೆ ಪ್ರತಿಕ್ರಿಯಿಸೊಲ್ಲ ಎಂದರು.
ಬಿಪಿಎಲ್ ಕಾರ್ಡ್ ಇದ್ದು ಟ್ಯ್ರಾಕ್ಟರ್ ಇರುವವರಿಗೆ ಪಡಿತರ ಅಕ್ಕಿಕೊಡೊಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಸಚಿವ ಗೋಪಾಲಯ್ಯ, ಹಿಂದಿನ ಸರ್ಕಾರದ ಮಾನದಂಡವನ್ನೇ ಅಳವಡಿಸುತ್ತಿದ್ದೇವೆ, ಇದರಲ್ಲಿ ಯಡಿಯೂರಪ್ಪ ಸರ್ಕಾರದಿಂದ ಯಾವುದೇ ಗೊಂದಲ ಇಲ್ಲಾ ಎಂದು ಸ್ಪಷ್ಟನೆ ನೀಡಿದರು.
ಆಲೂಗಡ್ಡೆ ಬೀಜ ಭೂಮಿಯಲ್ಲೇ ಕೊಳೀತಿದೆ, ಈಗಾಗಲೇ ಆಲೂಗೆಡ್ಡೆ ಬೆಳೆ ನಾಶವಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ, ಎಷ್ಟು ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಎಂ ಜೊತೆ ಆಲೂಗೆಡ್ಡೆ ಬೆಳೆಗಾರರಿಗೆ ಪರಿಹಾರದ ಬಗ್ಗೆ ಚರ್ಚಿಸುತ್ತೇನೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
Key words: five- new corona-cases- detected – Hassan district-Minister Gopalaiah