ಮೈಸೂರು,ಜೂ,18,2020(www.justkannada.in): ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಕೊನೆಯ ಇಂಗ್ಲೀಷ್ ಪರೀಕ್ಷೆ ನಡೆಯುತ್ತಿದ್ದು ಈ ನಡುವೆ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಮೈಸೂರಿನಲ್ಲಿ ಪೋಷಕರು ಪ್ರಾಂಶುಪಾಲರನ್ನ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಮೈಸೂರಿನ ಮಹಾರಾಣಿ ಕಾಲೇಜಿಗೆ ಪರೀಕ್ಷೆ ಬರೆಯಲು ಆಗಿಮಿಸಿದ್ದ ವಿದ್ಯಾರ್ಥಿಗಳು ದೊಂಬಿಯಲ್ಲಿ ಕಾಲೇಜು ಪ್ರವೇಶ ಮಾಡಿದ್ದು, ಯಾವುದೇ ಸೋಷಿಯಲ್ ಡಿಸ್ಟೆನ್ಸ್ ಇರಲಿಲ್ಲ. ಮಾರ್ಕ್ ಇಲ್ಲದೆ ಹಾಗೆಯೇ ವಿದ್ಯಾರ್ಥಿಗಳು ಗುಂಪಾಗಿ ಕಾಲೇಜು ಪ್ರವೇಶಿಸಿದ್ದರು. ಜತೆಗೆ ವಿದ್ಯಾರ್ಥಿಗಳು ಶಾಲಾ ಕೊಠಡಿ ತಿಳಿಯದೆ ಪರದಾಡಿದ ಪರಿಸ್ಥಿತಿ ಉಂಟಾಗಿತ್ತು.
ಈ ವೇಳೆ ಪೊಷಕರು ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಹಾರಾಣಿ ಕಾಲೇಜು ಪ್ರಾಂಶುಪಾಲ ಸೋಮಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳ ಆರೋಗ್ಯಕ್ಕೆ ಏನೂ ಕ್ರಮ ಕೈಗೊಂಡಿದ್ದೀರಿ . ಸರಿಯಾದ ಮಾರ್ಗದರ್ಶನ ನೀಡಿಲ್ಲ. ಯಾವುದೇ ಅಗತ್ಯ ಕ್ರಮ ಇಲ್ಲ ಎಂದು ಪ್ರಾಂಶುಪಾಲರಿಗೆ ಪ್ರಶ್ನೆ ಹಾಕಿ ಕಿಡಿಕಾರಿದರು. ಈ ವೇಳೆ ಪೋಷಕರು ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ನಡೆಯಿತು.
ಈ ಸಮಯದಲ್ಲಿ ಪ್ರಾಂಶುಪಾಲರಾದ ಸೋಮಣ್ಣ ದಯವಿಟ್ಟು ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಿ. ಮಕ್ಕಳ ಜವಬ್ದಾರಿ ನಮ್ಮದು ಆತಂಕ ಬೇಡ ಎಂದು ಮನವಿ ಮಾಡಿದರು. ಬಳಿಕ ಒಬ್ಬೊಬ್ಬರಂತೆ ಪೋಷಕರು ತೆರಳಿದ ಪ್ರಸಂಗ ಕಂಡು ಬಂತು.
Key words: second PUC-Exam-mysore- parents-class- principal