ಮೈಸೂರು,ಜೂ,18,2020(www.justkannada.in): ಹೆಚ್.ವಿಶ್ವನಾಥ್ ಅವರಿಗೆ ಯಾಕಾಗಿ ವಿಧಾನಪರಿಷತ್ ಟಿಕೆಟ್ ಕೈ ತಪ್ಪಿದೆ ಎಂಬುದು ಗೊತ್ತಿಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ನೋಡಬೇಕು ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಕೋರ್ ಕಮಿಟಿಯಲ್ಲಿ ಹೆಚ್.ವಿಶ್ವನಾಥ್ ಅವರ ಹೆಸರು ಅಂತಿಮವಾಗಿತ್ತು. ನಾಲ್ಕನೇ ಅಭ್ಯರ್ಥಿ ಹೆಸರು ಫೈನಲ್ ಆಗಿರಲಿಲ್ಲ.ರಾಜ್ಯದಿಂದ ಯಾವುದೇ ಪಟ್ಟಿ ಕಳುಹಿಸಿದ್ರು ರಾಷ್ಟ್ರೀಯ ಪಕ್ಷದಲ್ಲಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಹೀಗಾಗಿ ಯಾಕಾಗಿ ಅವರಿಗೆ ಟಿಕೆಟ್ ತಪ್ಪಿದೆ ಎಂಬುದು ಗೊತ್ತಿಲ್ಲ. ವಿಶ್ವನಾಥ್ ಪೋನ್ ಮಾಡಿ ಮಾತನಾಡಿದ್ರು. ಮುಂದೆ ಏನು ಮಾಡಬೇಕು ಎಂಬುದನ್ನು ನೋಡಬೇಕು. ಈ ಬಗ್ಗೆ ಯಡಿಯೂರಪ್ಪ ಜೊತೆ ಸಹ ಚರ್ಚೆ ಮಾಡುತ್ತೇವೆ. ವಿಶ್ವನಾಥ್ ಜೆ.ಡಿ.ಎಸ್ ಸೇರುವ ಮುನ್ನ ಏನು ಆಗಿರಲಿಲ್ಲ ಎಂದು ತಿಳಿಸಿದರು.
ಈಗಾಗಲೂ ಹೆಚ್ ವಿಶ್ವನಾಥ್ ಅವರು ಹತಾಶೆ ಪಡಬೇಕಾಗಿಲ್ಲ. ಅವರ ಅರೋಗ್ಯ ಚೆನ್ನಾಗಿದೆ. ಈ ಹಿಂದೆ ಚುನಾವಣೆಗೆ ನಿಲ್ಲಬೇಡಿ ಎಂದು ನಾನು ಹೇಳಿದ್ದೆ. ಅವರು ಸಹ ನಿಲ್ಲದಂತೆ ತೀರ್ಮಾನ ಮಾಡಿದ್ರು. ಅಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲಿ ಇರಲಿಲ್ಲ. ಈ ಕಾರಣಕ್ಕೆ ರಿಸ್ಕ್ ಬೇಡ ಎಂದಿದ್ದೆ. ಆದರೂ ಸಹ ಅವರಿಗೆ ಟಿಕೆಟ್ ನೀಡಬೇಕಿತ್ತು. ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸಹ ಸೋತ್ತಿದ್ದರು, ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕಾರಣದಿಂದ ಹೆಚ್.ವಿಶ್ವನಾಥ್ ಅವರಿಗೂ ನೀಡಬೇಕಿತ್ತು. ಜೊತೆಗೆ ಅಂದು ಎಲ್ಲಾ ಶಾಸಕರನ್ನು ಒಗ್ಗೂಡಿಸಿದ್ದು ಎಚ್.ವಿಶ್ವನಾಥ್ ಅವರೇ ಎಂದು ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
Key words: MLC- ticket – H.Vishwanath-MP Srinivas Prasad –mysore