ಬೆಂಗಳೂರು,ಜೂ,18,2020(www.justkannada.in): ಅವ್ಯವಹಾರ ಆರೋಪ ಸಂಬಂಧ ಬೆಂಗಳೂರಿನ ಗುರುರಾಘವೇಂದ್ರ ಸೌಹಾರ್ಧ ಕೋ-ಆಪರೇಟಿವ್ ಬ್ಯಾಂಕ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ 892 ಕೋಟಿ ಅವ್ಯವಹಾರ ಪತ್ತೆಯಾಗಿದೆ.
ಬಸವನಗುಡಿಯಲ್ಲಿರುವ ಗುರುರಾಘವೇಂದ್ರ ಸೌಹಾರ್ಧ ಕೋ-ಆಪರೇಟಿವ್ ಬ್ಯಾಂಕ್ ನ ಮುಖ್ಯ ಕಚೇರಿ ಸೇರಿ ನಾಲ್ಕು ಕಡೆ ಎಸಿಬಿ ದಾಳಿ ನಡೆಸಿತ್ತು. ಡಿವೈಎಸ್ಪಿ ತಮ್ಮಯ್ಯ ಮತ್ತು ವಜೀರ್ ಅಲಿ ಖಾನ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು ಈ ವೇಳೆ ಭಾರಿ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ.
ಸುಮಾರು 60 ನಕಲಿ ಅಕೌಂಟ್ ಗಳು ಪತ್ತೆಯಾಗಿದ್ದು 149 ಕೋಟಿ ಠೇವಣಿ ಇತ್ತು ಎನ್ನಲಾಗಿದೆ. ಈ ಮೂಲಕ ಭಾರಿ ಪ್ರಮಾಣದ ನಕಲಿ ಅಕೌಂಟ್ ಗಳು ಪತ್ತೆಯಾಗಿದ್ದು ಸುಮಾರು 3,300 ಗ್ರಾಹಕರಿಗೆ ಬ್ಯಾಂಕ್ ಮಕ್ಮಲ್ ಟೋಪಿ ಹಾಕಿದೆ. ಬ್ಯಾಂಕ್ ಅಧ್ಯಕ್ಷ ಡಾ.ಕೆ.ರಾಮಕೃಷ್ಣ ಬ್ಯಾಂಕ್ ನ ಮಾಜಿ ಸಿಇಓ, ಉಪಾಧ್ಯಕ್ಷ ಸೇರಿ 24 ಜನರು ಈ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ.
Key words: ACB- attack – Guru Raghavendra -Co-operative Bank-892 crore