ಮೈಸೂರು,ಜೂ,19,2020(www.justkannada.in): ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ. ಈ ಬಾರಿ ಕೊರೊನಾ ವೈರಸ್ ವೈರಸ್ ನ ಕರಿನೆರಳು ಆವರಿಸಿರುವುದರಿಂದ ಮನೆಯಲ್ಲೇ ಯೋಗ ಘೋಷಣೆಯಡಿ ವಿಶ್ವ ಯೋಗ ದಿನಾಚರಣೆ ಆಚರಿಸಲು ಕರೆ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಪ್ರತಿಬಾರಿ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಉತ್ಸಾಹದಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ವೈರಸ್ ನ ಕರಿನೆರಳು ಆವರಿಸಿರುವುದರಿಂದ ಮನೆಯಲ್ಲೇ ಯೋಗ ಘೋಷಣೆಯಡಿ ವಿಶ್ವ ಯೋಗದಿನಾಚರಣೆ ಆಚರಿಸಲು ಕರೆ ನೀಡಲಾಗಿದೆ. ಕೊರೊನಾ ವೈರಸ್ ನ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ವರ್ಷ ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಂದು ಮನೆಯಲ್ಲಿ ಮತ್ತು ಮನೆಯವರೊಂದಿಗೆ ಯೋಗ ಘೋಷಣೆಯಡಿ ಮನೆ ಮೇಲಿನ ಟೆರೇಸ್ ನಲ್ಲಿ ಯೋಗ ಮಾಡಲು ಕರೆ ನೀಡಲಾಗಿದ್ದು ಮುಂದಿನ ಭಾನುವಾರ ಬೆಳಿಗ್ಗೆ 7 ರಿಂದ 7:45 ರವರೆಗೆ ಯೋಗ ಮಾಡಬೇಕು ಎಂದು ಹೇಳಿದರು.
ಮೈಸೂರು ಯೋಗ ಫೆಡರೇಶನ್ ಮತ್ತು ಜಿ.ಎಸ್.ಎಸ್ ಯೋಗ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ಸ್ ಫೌಂಡೇಷನ್, ಬಾಬಾ ರಾಮದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ವಿಶ್ವಯೋಗ ದಿನಾಚರಣೆ ನಡೆಯಲಿದೆ. ಮನೆಯಿಂದಲೇ ಯೋಗ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡುವವರಿಗೂ ಸರ್ಟಿಫಿಕೇಟ್ ನೀಡಲಾಗುವುದು. ಟೆರಸ್ ಮೇಲೆ ಯೋಗ ಮಾಡುವುದನ್ನ ಡ್ರೋಣ ಕ್ಯಾಮರ ಬಳಸಿ ಸೆರೆಯಿಡಿಯಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.
ಇಂದು ನಾಲ್ಕುಕೊರೋನಾ ಪಾಸಿಟಿವ್ ಬರುವ ಸಾಧ್ಯತೆ ಇದೆ…
ಮೈಸೂರಿನಲ್ಲಿ ಇಂದು ನಾಲ್ಕು ಕೊರೋನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಎಲ್ಲ ಪಾಸಿಟಿವ್‌ಗಳು ಪ್ರೈಮರಿ ಸಂಪರ್ಕದಿಂದಲೇ ಬಂದಿವೆ. ತಮಿಳುನಾಡಿದ ಸಂಪರ್ಕದ ನಾಲ್ವರಲ್ಲಿ ಕೊರೊನಾ ಸೋಂಕು ತಗುಲಿದೆ. ಇಂದು ಸಂಜೆಯ ಬುಲೆಟಿನ್‌ನಲ್ಲಿ ಘೋಷಣೆ ಆಗಲಿದೆ. ನಿತ್ಯ ಹೊರರಾಜ್ಯದಿಂದ ಸರಾಸರಿ 150ಕ್ಕು ಹೆಚ್ಚು ಜನ ಬರ್ತಿದ್ದಾರೆ. ಬಂದವರನ್ನ ಕ್ವಾರಂಟೈನ್ ಮಾಡ್ತಿದ್ದೀವಿ. ಅವರನ್ನ ಪರೀಕ್ಷೆಗೆ ಒಳಪಡಿಸಿ ಸೋಂಕು ಲಕ್ಷಣ ಇದ್ರೆ ಆಸ್ಪತ್ರೆಗೆ ದಾಖಲು ಮಾಡ್ತಿವಿ ಎಂದು ಅಭಿರಾಂ ಜೀ ಶಂಕರ್ ತಿಳಿಸಿದರು.
ಕೊರೊನಾ ವೈರಸ್ ನ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುವವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೈಸೂರಿನ ಇಟ್ಟಿಗೆಗೂಡಿನಲ್ಲಿ ಅಜ್ಜಿ ಮೊಮ್ಮಗನಿಗೆ ಕೊರೊನಾ ಪಾಸಿಟಿವ್ ಇದೆ. ಅಜ್ಜಿ ಮೊಮ್ಮಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನವೇ ಮತ್ತೆ ಸೊಂಕು ತಗುಲಿದೆ.. ಅವರ ಮನೆಯ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವೊಮ್ಮೆ ಈ ರೀತಿ ಆಗುತ್ತದೆ ಎಂದು ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದರು.
Key words: mysore- yoga -home -terrace – Mysore DC- Abhiram Ji Shankar.