ಮೈಸೂರು,ಜೂ,22,2020(www.justkannada.in): 46ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಸಿನಿಮಾಗಳ ಮೂಲಕ ಸಿನಿ ರಸಿಕರ ಮನಸ್ಸಿನಲ್ಲಿ ಉಳಿದಿದ್ದ ಮೈಸೂರಿನ ಶಾಂತಲ ಚಿತ್ರಮಂದಿರ ಇದೀಗ ಇತಿಹಾಸ ಪುಟ ಸೇರಲಿದೆ.
ವರನಟ ಡಾ.ರಾಜ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿ಼ಸ್ಟಾರ್ ರವಿಚಂದ್ರನ್ ಸೇರಿದಂತೆ ಅನೇಕ ದಿಗ್ಗಜರ ಸಿನಿಮಾಗಳು ಪ್ರದರ್ಶನ ಕಂಡಿದ್ದ ಶಾಂತಲಾ ಚಿತ್ರಮಂದಿರ ಸಿನಿಪ್ರಿಯರ ಮನಗೆದ್ದಿತ್ತು. ಕನ್ನಡ, ತಮಿಳು, ತೆಲಗು, ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳ ಅತ್ಯುತ್ತಮ ಚಿತ್ರಗಳನ್ನ ಶಾಂತಲ ಚಿತ್ರಮಂದಿರ ಪ್ರದರ್ಶಿಸಿತ್ತು.
ಹಿಂದಿನ ಹಾಗೂ ಇಂದಿನ ಹಲವಾರು ನಟರ ಅಚ್ಚುಮೆಚ್ಚಿನ ಚಿತ್ರಮಂದುರವಾಗಿ ಶಾಂತಲಾ ಕಾಣಿಸಿಕೊಂಡಿತ್ತು. ಶಿಸ್ತು, ಸ್ವಚ್ಚತೆ ಮೂಲಕ ಜನರ ಮನಮೋಹಕಗೊಳಿಸಿದ್ದ ಶಾಂತಲ ಟಾಕೀಸ್ ಇದೀಗ ಲೀಜ್ ಅವಧಿ ಮುಗಿದ ಹಿನ್ನಲೆ ಶಾಂತಲ ಮೌನ ಶರಣಾಗಿದೆ.
Key words: mysore- shanthala- film takies-history