ಮೈಸೂರು,ಜೂ,23,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರೋನಾ ವೈರಸ್ ಭೀತಿ ಎದುರಾಗಿದ್ದು, ಕೊರೋನಾ ಕಮ್ಯೂನಿಟಿ ಸ್ಪ್ರೆಡ್ಡಿಂಗ್ (ಸಮುದಾಯ ಹರಡುವಿಕೆ) ಶುರುವಾಗಿದೆಯೇ ಎಂಬ ಆತಂಕ ಮನೆ ಮಾಡಿದೆ.
ಹೌದು 3 ಜನ ಸೋಂಕಿತರ ಟ್ರ್ಯಾವಲ್ ಹಿಸ್ಟರಿ ದಿಗಿಲು ತರುತ್ತಿದೆ. ಮೂವರು ಸೋಂಕಿತರು ನಗರದ ವಿವಿಧ ಭಾಗಗಳಲ್ಲಿ ಸಂಚಾರ ಮಾಡಿದ್ದು, ಹೀಗಾಗಿ ಮೈಸೂರಿನ ಜನತೆಯಲ್ಲಿ ಕೊರೋನಾ ಭೀತಿ ಕಾಡುತ್ತಿದೆ.
ಪ್ರಕರಣ 1…
ಸೋಂಕಿತ ವ್ಯಕ್ತಿ ನಂಜನಗೂಡಿನ ಆರ್.ಪಿ.ರಸ್ತೆ 5ನೇ ಕ್ರಾಸ್‌ನಲ್ಲಿ ವಾಸವಾಗಿದ್ದಾರೆ. ಇವರು ಜೂನ್ 12ರಂದು ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರಯಾಣ ಮಾಡಿದ್ದಾರೆ. ಬಳಿಕ ಅದೇ ದಿನ ಬಸ್ ನಂ. KA10 F0528ನಲ್ಲಿ ಬೆಳಗ್ಗೆ 9.30ಕ್ಕೆ ನಂಜನಗೂಡಿಗೆ ಪ್ರಯಾಣಿಸಿದ್ದು, ಈ ಬಸ್‌ಗಳಲ್ಲಿ ಪ್ರಯಾಣ ಮಾಡಿದವರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಪ್ರಕರಣ 2
ನಿನ್ನೆ ರಮ್ಮನಹಳ್ಳಿಯ ಹಣ್ಣಿನ ವ್ಯಾಪಾರಿಗೆ ಕರೊನಾ ಪಾಸಿಟಿವ್ ದೃಢವಾಗಿದ್ದು ಈ ವ್ಯಕ್ತಿಅರ್ಧ ಮೈಸೂರನ್ನೇ ಸುತ್ತಿದ್ದಾರೆ. ವಾಹನ ಸಂಖ್ಯೆ KA55 8571 ವಾಹನದಲ್ಲಿ ಈ ವ್ಯಾಪಾರಿ ಓಡಾಡಿದ್ದು ರಾಮಕೃಷ್ಣ ನಗರದ ಸಾಯಿಬಾಬಾ ದೇವಸ್ಥಾನದ ರಸ್ತೆ, ಕುವೆಂಪುನಗರದ ಕಾಂಪ್ಲೆಕ್ಸ್ ಹತ್ತಿರ, ಹೂಟಗಳ್ಳಿ ಸಿಗ್ನಲ್ ವೃತ್ತದ ಬಳಿ, ಮಾವಿನಹಣ್ಣು ಹಾಗೂ ಬಾಳೆ ಹಣ್ಣಿನ ವ್ಯಾಪಾರ ಮಾಡಿದ್ದಾರೆ. ಹೀಗಾಗಿ 15 ದಿನದಲ್ಲಿ ಹಣ್ಣು ಖರೀದಿ ಮಾಡಿರುವವರು ಮೊದಲು ಟೆಸ್ಟ್ ಮಾಡಿಸಲು ಸೂಚನೆ ನೀಡಲಾಗಿದೆ.
ಇನ್ನು ಇದೇ ವ್ಯಕ್ತಿ ವಿವಿಧ ಕ್ಲಿನಿಕ್, ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಜೂನ್ 8 , 10 , 12ರಂದು ರಮ್ಮನಹಳ್ಳಿ ಗ್ರಾಮದ ಸಂಜೀವಿನಿ ಕ್ಲಿನಿಕ್. 13 ರಂದು ಮೈಸೂರು ನಗರದ ವಾತ್ಸಲ್ಯ ಆಸ್ಪತ್ರೆ. 15 ರಂದು ರಮ್ಮನಹಳ್ಳಿಯ ತನಿಷಾ ಕ್ಲಿನಿಕ್‌ಗೆ ಭೇಟಿ ನೀಡಿದ್ದಾರೆ.
ಪ್ರಕರಣ 3
ಮೂರನೇ ಪ್ರಕರಣದಲ್ಲಿ ಮೈಸೂರಿನ ದಟ್ಟಗಳ್ಳಿ 3ನೇ ಹಂತದ ಕನಕದಾಸ ನಗರದ ನಿವಾಸಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ವ್ಯಕ್ತಿ ದಿನಾಂಕ 16ರಂದು ಕೆ.ಆರ್. ಮಾರ್ಕೆಟ್ ಹೊರ ಭಾಗದಲ್ಲಿ ತರಕಾರಿ ಖರೀದಿ ಮಾಡಿದ್ದಾರೆ. ನಂತರ ಅಗ್ರಹಾರದ ಸುಬ್ಬಣ್ಣ ಅಂಡ್ ಕಂಪನಿಯಲ್ಲಿ ದಿನಸಿ ಖರೀದಿಸಿದ್ದಾರೆ. ದಿನಾಂಕ 17ರಂದು ದಟ್ಟಗಳ್ಳಿ ಕೆ ಇ ಬಿ ವೃತ್ತದ ರಿಲಾಯನ್ಸ್ ಬಳಿಯ ಸ್ಟಾಲ್‌ನಲ್ಲಿ ಮಟನ್ ಖರೀದಿಸಿರುವ ಇವರು ಜೂನ್ 20 ರಂದು ಆಟೋದಲ್ಲಿ ಮಾವನ ಜತೆ ಕುವೆಂಪುನಗರದ ಕಾಂಪ್ಲೆಕ್ಸ್ ಬಳಿಯ ಇಂದಿರಾ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಈ ಸ್ಥಳಗಳಿಗೆ ಭೇಟಿ ನೀಡಿದವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
Key words: mysore- corona-Community Spreading –travel history