ಮೈಸೂರು, ಜೂ.01, 2019 : (www.justkannada.in news ) : ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನ ಆಡಳಿತ ವರ್ಗಕ್ಕೆ ಟೆಂಡರ್ ಮಂಜೂರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ.
ಕೆಲ ದಿನಗಳ ಹಿಂದೆ ಮೈಸೂರು ಮೆಡಿಕಲ್ ಕಾಲೇಜ್ ವತಿಯಿಂದ, providing manpower on out source basis to Mysore Medical College And Research Institute, Mysore. ಹೆಸರಿನಡಿ ಮೂರು ವಿವಿಧ ಕಾರ್ಯದ ಟೆಂಡರ್ ಆಹ್ವಾನಿಸಲಾಗಿತ್ತು.
ಕ್ಲೀನಿಂಗ್ ಸೂಪರ್ ವೈಸರ್ , ಕ್ಲೀನಿಂಗ್ ಸ್ಟಾಫ್ , ಕ್ಲೀನಿಂಗ್ ಮೆಟಿರಿಯಲ್ಸ್ ಕಾರ್ಯದಡಿ ಟೆಂಡರ್ ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದ ವಿವಿಧೆಡೆಯಿಂದ ಅರ್ಹ ಬಿಡ್ಡುದಾರರು ಭಾಗವಹಿಸಿದ್ದರು. ವಿಶೇಷ ಅಂದ್ರೆ ಮೂರು ಕಾರ್ಯದಡಿ ಮೊದಲ ಎರಡು ಕೆಲಸಗಳಿಗೆ ಬಹುತೇಕರು ಸಮನಾದ ಒಂದೇ ದರವನ್ನು ಮಂಡಿಸಿದ್ದರೆ, ಕಡೆಯ ಕಾರ್ಯಕ್ಕೆ ಒಬ್ಬೊಬ್ಬರು ಒಂದೊಂದು ದರ ನಮೂದಿಸಿದ್ದಾರೆ.
ಈ ಪೈಕಿ ಒಂದು ಸಂಸ್ಥೆ ಮಾತ್ರ ಕೇವಲ 1 ರೂ. ನಮೂದಿಸಿ ಗಮನ ಸೆಳೆದಿದೆ. ಕ್ಲೀನಿಂಗ್ ಮೆಟಿರಿಯಲ್ಸ್ ಕಾರ್ಯದಡಿ ಪ್ರತಿ ತಿಂಗಳು ಹ್ಯಾಂಡ್ ಗ್ಲೌಸ್, ಪೊರಕೆ, ಪಿನಾಯಲ್, ಬ್ಲೀಚಿಂಗ್ ಪೌಡರ್, ಆಸಿಡ್ ಪೂರೈಸಬೇಕಾಗುತ್ತದೆ. ಇವಿಷ್ಟು ಕೆಲಸಕ್ಕ ಆ ಸಂಸ್ಥೆ ಮಾಸಿಕ 1 ರೂಪಾಯಿ ನಮೂದಿಸಿರುವುದು ಗಮನ ಸೆಳೆದಿದೆ. (ಆರ್.ಟಿ.ಐ ಮೂಲಕ ಈ ಸಂಬಂದ ಪಡೆದ ದಾಖಲೆ ಲಭಿಸಿದ್ದು ಅಲ್ಲಿ ಮಾಹಿತಿ ಬಹಿರಂಗಗೊಂಡಿದೆ )
ಈಗ ಮೈಸೂರು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರಿಗೆ ಇದೊಂದು ಸಂದಿಗ್ಧ ಸಂಗತಿಯಾಗಿದೆ. ಕಡಿಮೆ ದರ ನಮೂದಿಸಿದವರಿಗೆ ಟೆಂಡರ್ ನೀಡಬೇಕು ಎಂಬುದೇನೋ ನಿಜ. ಆದರೆ ಈ ರೀತಿ ಕೇವಲ 1 ರೂ. ನಮೂದಿಸಿರುವುದು ಅವರಲ್ಲೂ ಗೊಂದಲ ಮೂಡಿಸಿದೆ. ಎಂಎಂಸಿ ವ್ಯಾಪ್ತಿಗೆ ಒಳಪಡುವ ಹತ್ತಕ್ಕೂ ಹೆಚ್ಚು ಹಾಸ್ಟೆಲ್ ಗಳಿದ್ದು ಈ ಎಲ್ಲಾ ಹಾಸ್ಟೆಲ್ ಗಳ ನಿರ್ವಹಣೆ ಮಾಡಬೇಕಾಗಿದೆ. ಕೇವಲ 1 ರೂ.ಗೆ ಇದು ಸಾಧ್ಯವೆ ಎಂಬುದು ಯಕ್ಷ ಪ್ರಶ್ನೆ..?
ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ನಂಜರಾಜ್, ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
Key words : mysore-medical-college-cleaning-tender-one-rupees