ಮೈಸೂರು,ಜೂ,27,2020(www.justkannada.in): ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಮಧ್ಯೆ ಗ್ರಾಮಂತರ ಭಾಗಕ್ಕೂ ಮಹಾಮಾರಿ ಲಗ್ಗೆ ಇಡುತ್ತಿದೆ. ಹೀಗಾಗಿ ಹೆಚ್.ಡಿ ಕೋಟೆಯಲ್ಲಿ ಮಧ್ಯಾಹ್ನ ನಂತರ ವ್ಯಾಪಾರ ವಹಿವಾಟು ಬಂದ್ ಗೆ ಚಿಂತನೆ ನಡೆಸಲಾಗಿದೆ.
ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಇಂದು ತಾಲ್ಲೂಕು ಆಡಳಿತ ಮಂಡಳಿ ಹಾಗೂ ವರ್ತಕರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಹೆಚ್.ಡಿ.ಕೋಟೆ ಪಟ್ಟಣ, ಹ್ಯಾಂಡ್ ಪೋಸ್ಟ್, ಸರಗೂರು ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಮಧ್ಯಾಹ್ನ 2 ಘಂಟೆ ನಂತರ ವ್ಯಾಪಾರ ವಹಿವಾಟು ಬಂದ್ ಮಾಡುವ ಕುರಿತು ಚರ್ಚಿಸಲಾಯಿತು. ಬೆಳಿಗ್ಗೆ 7 ರಿಂದ ಮದ್ಯಾಹ್ನ 2 ಘಂಟೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವ ಕುರಿತು ಚಿಂತನೆ ಮಾಡಲಾಗಿದೆ.
ಸೋಮವಾರದಿಂದ ಶನಿವಾರದವರೆಗೆ ಪ್ರಾಯೋಗಿಕವಾಗಿ ಮಧ್ಯಾಹ್ನದ ನಂತರ ಅಂಗಡಿ ಮುಂಗಟ್ಟು ಬಂದ್ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಹಾಗೆಯೇ ಭಾನುವಾರ ಅಂಗಡಿ ಮುಂಗಟ್ಟು ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಆಗಲಿದೆ. ಈ ಕ್ರಮ ಯಶಸ್ವಿಯಾದಲ್ಲಿ ತಾಲ್ಲೂಕು ಆಡಳಿತದಿಂದ ಇದೇ ಕ್ರಮಗಳನ್ನ ಮುಂದುವರೆಸುವ ಸಾಧ್ಯತೆ ಇದೆ.
ತಾಲ್ಲೂಕು ಆಡಳಿತ ಕ್ರಮಕ್ಕೆ ವರ್ತಕರಿಂದಲೂ ಸಮ್ಮತಿ ದೊರಕಿದ್ದು ಅಕ್ಕಪಕ್ಕದ ತಾಲ್ಲೂಕಿನಲ್ಲಿ ಕೊರೋನಾ ಸೊಂಕೀತರು ಹೆಚ್ಚಾಗುತ್ತಿರುವ ಹಿನ್ನಲೆ ಹೆಚ್.ಡಿ.ಕೋಟೆ ತಾಲ್ಲೂಕಿಗೆ ಕೋರೋನಾ ಸೊಂಕು ಹರಡದಂತೆ ತಡೆಯಲು ತಾಲ್ಲೂಕು ಆಡಳಿತದಿಂದ ಈ ಕ್ರಮ ಕೈಗೊಂಡಿದೆ.
Key words: Corona -spreading -trade – HD kote- MLA- anil chikkamadu