ಹೊಸದಿಲ್ಲಿ, ಜೂನ್ 28, 2020 (www.justkannada.in): ಬಾಬಾ ರಾಮ್‌ದೇವ್ ಸೇರಿದಂತೆ ಐವರ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ.
ಕೋವಿಡ್ ಔಷಧ ಕುರಿತು ದಾರಿ ತಪ್ಪಿಸಿರುವ ಆಪಾದನೆ ಸಂಬಂಧ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಲರಾಮ್ ಜಾಖಡ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆ ಹಿನ್ನೆಲೆಯಲ್ಲಿ, ಜೈಪುರದಲ್ಲಿ ಬಾಬಾ ರಾಮ್‌ದೇವ್, ಪತಂಜಲಿ ಸಂಸ್ಥೆ ಸಿಇಒ ಬಾಲಕೃಷ್ಣ ಆಚಾರ್ಯ, ವಿಜ್ಞಾನಿ ಅನುರಾಗ್ ವಘ್ನೇ, ಡಾ.ಬಲ್ಬಿರ್ ಸಿಂಗ್ ತೋಮರ್, ಡಾ.ಅನುರಾಗ್ ತೋಮರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೊರೊನಾ ಸೋಂಕಿತರಿಗಾಗಿ ಪತಂಜಲಿ ಆಯುರ್ವೇದ ಸಂಸ್ಥೆಯು “ಕೊರೊನಿಲ್’ ಔಷಧವನ್ನು ಅಭಿವೃದ್ಧಿಪಡಿಸಿದೆ ಎಂದು ಬಾಬಾ ರಾಮ್‌ದೇವ್ ಮಂಗಳವಾರ ತಿಳಿಸಿದ್ದರು.