ನವದೆಹಲಿ,4,2020(www.justkannada.in): ಭಗವಾನ್ ಬುದ್ಧ ದೇಶಕ್ಕೆ ಶಾಂತಿ ಸಂದೇಶ ಸಾರಿದರು. ಜಗತ್ತಿನ ಹಲವು ಸವಾಲುಗಳಿಗೆ ಬುದ್ಧನ ಆದರ್ಶಗಳು ಶಾಶ್ವತ ಪರಿಹಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಆಷಾಢ ಪೂರ್ಣಿಮೆ ದಿನ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಗುರುಗಳನ್ನು ಸ್ಮರಿಸುವ ದಿನವೇ ಗುರುಪೂರ್ಣಿಮೆಯಾಗಿದೆ. ಭಗವಾನ್ ಬುದ್ಧ ದೇಶಕ್ಕೆ ಶಾಂತಿ ಸಂದೇಶ ಸಾರಿದರು. ಬೌದ್ಧ ಧರ್ಮ ಶಾಂತಿ, ಅಹಿಂಸೆ ಸಂದೇಶವನ್ನು ಸಾರಿದೆ. 21ನೇ ಶತಮಾನ ಆಶಾದಾಯಕ ಶತಮಾನವಾಗಿದೆ. ಬೌದ್ಧ ಸ್ಥಳಗಳ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಾಗತಿಕ ಸಮಸ್ಯೆಗಳಿಗೆ ಯುವಶಕ್ತಿಯಿಂದ ಪರಿಹಾರ ಸಿಗಲಿದೆ. ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಈ ಸವಾಲುಗಳಿಗೆ ಬುದ್ಧನ ಆದರ್ಶಗಳು ಶಾಶ್ವತ ಪರಿಹಾರವಾಗಿವೆ. ಈ ಹಿಂದೆಯೂ ವರ್ತಮಾನದಲ್ಲಿಯೂ ಪ್ರಸ್ತುತವಾಗಿದೆ. ಅವರ ಆದರ್ಶಗಳು ಭವಿಷ್ಯದಲ್ಲಿಯೂ ಪ್ರಸ್ತುತವಾಗುತ್ತವೆ ಎಂದು ಪ್ರಧಾನಿ ಹೇಳಿದರು.
Key words: ashada poornime-pm modi-speech