ಮೈಸೂರಿನ ‘ ಆಂದೋಲನ ‘ ಪತ್ರಿಕೆಗೆ ನೂತನ ಸಾರಥಿಯಾಗಿ ಹಿರಿಯ ಪತ್ರಕರ್ತ ಉಮೇಶ್ ಭಟ್ .

ಮೈಸೂರು, ಜು.06, 2020 : (www.justkannada.in news) : ಸ್ಥಳೀಯ ಪ್ರಾದೇಶಿಕ ದಿನ ಪತ್ರಿಕೆ ‘ಆಂದೋಲನ’ಗೆ ಹಿರಿಯ ಪತ್ರಕರ್ತ ಉಮೇಶ್ ಭಟ್ ಇಂದಿನಿಂದ ನೂತನ ಸಾರಥಿ.

ಪತ್ರಿಕಾಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚುಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಉಮೇಶ್ ಭಟ್, ಇದೀಗ ಆಂದೋಲನ ಪತ್ರಿಕೆಯ ಅಸೋಸಿಯೇಟ್ ಎಡಿಟರ್ ಆಗಿ ನೇಮಕಗೊಂಡಿದ್ದಾರೆ.
1999 ರಲ್ಲಿ ಶಿವಮೊಗ್ಗದಿಂದ ಪತ್ರಿಕಾ ವೃತ್ತಿ ಆರಂಭಿಸಿದ ಉಮೇಶ್ ಭಟ್, ಬಳಿಕ 1999 ರಲ್ಲಿ ಮೈಸೂರಿನ ಆಂದೋಲನ ಪತ್ರಿಕೆಗೆ ವರದಿಗಾರನಾಗಿ ಸೇರ್ಪಡೆಗೊಂಡರು. 2002 ರ ತನಕ ಆಂದೋಲನ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿ ಉಮೇಶ್ ಭಟ್, ನಂತರ ವಿಜಯ ಕರ್ನಾಟಕ ಮೈಸೂರು ಆವೃತ್ತಿಯಲ್ಲಿ ವರದಿಗಾರರಾಗಿ ಸೇರ್ಪಡೆಗೊಂಡರು. jk-logo-justkannada-logo

ಬಳಿಕ 2016 ರಲ್ಲಿ ಮೈಸೂರಿನಿಂದ ಬಾಗಲಕೋಟೆಗೆ ಹಾಗೂ 2017 ರಲ್ಲಿ ವಿಜಯಪುರಕ್ಕೆ ವರ್ಗವಣೆ. ಅಲ್ಲಿ ವಿಜಯಕರ್ನಾಟಕ ಬ್ಯೂರೋ ಮುಖ್ಯಸ್ಥರಾಗಿ ಹುದ್ದೆ ನಿರ್ವಹಣೆ. ಇದೀಗ ಬದಲಾದ ಸನ್ನಿವೇಶದಲ್ಲಿ ಮತ್ತೆ ಮಾತೃ ಸಂಸ್ಥೆ, ಮೈಸೂರಿನ ಆಂದೋಲನಗೆ ಮರು ಆಗಮನ.
ಎರಡು ದಶಕಗಳ ಸುದೀರ್ಘ ಪತ್ರಿಕಾಕ್ಷೇತ್ರದ ಪಯಣದ ಬಳಿಕ ಮತ್ತೆ ಮರಳಿ ಮಾತೃ ಸಂಸ್ಥೆಗೆ ಆಗಮಿಸಿರುವ ಉಮೇಶ್ ಭಟ್ ಅವರನ್ನು ಜಸ್ಟ್ ಕನ್ನಡ ಮಾತನಾಡಿಸಿತು.

ಮಾಧ್ಯಮ ಕ್ಷೇತ್ರ ಸೇರಿದಂತೆ ಎಲ್ಲಾ ರಂಗಗಳಲ್ಲೂ ಬದಲಾವಣೆ ಜಗದ ನಿಯಮ. ಹಾಗಾಗಿ ನಾನು ಮತ್ತೆ ಮರಳಿ ಆಂದೋಲನಗೆ ಬಂದಿರುವುದಕ್ಕೆ ವಿಶೇಷ ಕಾರಣವಿಲ್ಲ. ಈ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಂದೋಲನಕ್ಕೂ ಈಗಿನ ಆಂದೋಲನಕ್ಕೂ ವರ್ಕ್ ಸ್ಟೈಲ್ ನಲ್ಲಿ ಕೊಂಚ ಮಾರ್ಪಾಡು ಆಗಿರಬಹುದು. ಆದರೆ, ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರ ಧ್ಯೆಯೋದ್ದೇಶಕ್ಕೆ ಪೂರಕವಾಗಿಯೇ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಯಾವ ಚಳವಳಿ, ದಮನಿತರ ದನಿಯಾಗಿ ಆಂದೋಲನ ಈಗಲೂ ಹೊರ ಹೊಮ್ಮುತ್ತಿರುವುದು ಪತ್ರಿಕೆಯ ವಿಶೇಷ. ಇಂಥ ಪತ್ರಿಕೆಗೆ ಅಸೋಸಿಯೇಟ್ ಎಡಿಟರ್ ಆಗಿ ನೇಮಕಗೊಂಡಿರುವುದು ಖುಷಿಯ ಸಂಗತಿ.

mysore-regional-paper-andolana-umesh.bhatta-joins-associate-editor-media
ಮಾಧ್ಯಮ ಕ್ಷೇತ್ರದಲ್ಲಿ ಈಗ ಹಲವಾರು ಬದಲಾವಣೆಗಳಾಗಿರುವ ಸಂಗತಿ ನನಗೂ ತಿಳಿದಿದೆ. ಈ ಮೊದಲು ಕೇವಲ ಮುದ್ರಣ ಮಾಧ್ಯಮ ಆನಂತರ ದೂರದರ್ಶನದ ಪ್ರಭಾವವಿತ್ತು. ಆದರೆ ಆನಂತರ ಖಾಸಗಿ ಸುದ್ದಿ ವಾಹಿನಿಗಳು, ಇದೀಗ, ಡಿಜಿಟಲ್ ಮೀಡಿಯಾ, ಸೋಷಿಯಲ್ ಮೀಡಿಯಾಗಳು ಸಹ ಸಾಕಷ್ಟು ಪ್ರಭಾವ ಬೀರುವಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಿವೆ. ಆದರೆ ಯಾವ ಪತ್ರಿಕೆ ಕಂಟೆಂಟ್ ಸಧೃಢವಾಗಿರುತ್ತದೋ, ಹೊಸತನದಿಂದ ಕೂಡಿರುತ್ತದೋ ಅಂಥ ಪತ್ರಿಕೆಗಳಿಗೆ ಓದುಗರ ಬೆಂಬಲ, ಮನ್ನಣೆ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಪತ್ರಿಕೆಗೆ ಮತ್ತಷ್ಟು ಹೊಸತನ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದು ಉಮೇಶ್ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ್ ಸೇರ್ಪಡೆ:

ಆಂದೋಲನ ಪತ್ರಿಕೆ ಮೈಸೂರಿನ ಮತ್ತೊರ್ವ ಹಿರಿಯ ಪತ್ರಕರ್ತ ರಮೇಶ್ ಕುಮಾರ್ ನಾಯ್ಕ್ ಸಹ ಸೇರ್ಪಡೆಗೊಂಡಿದ್ದಾರೆ.mysore-regional-paper-andolana-umesh.bhatta-joins-associate-editor-media

ಮೂಲತಃ ಚಾಮರಾಜನಗರದ ಈ ಪತ್ರಿಭೆ, ಕಳೆದ ಎರಡು ದಶಕಗಳಿಂದ ಪತ್ರಿಕಾಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವಿ. ಆರಂಭದಲ್ಲಿ ಮೈಸೂರು ಮಿತ್ರ, ಬಳಿಕ ಸಂಯುಕ್ತ ಕರ್ನಾಟಕ, ಆನಂತರ ವಿಜಯಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ರಮೇಶ್ ಕುಮಾರ್, ಇದೀಗ ಆಂದೋಲನ ಪತ್ರಿಕೆ ಸಂಪಾದಕ ರವಿಕೋಟಿ ಅವರ ಸಮ್ಮುಖದಲ್ಲಿ ಕೆಲ ದಿನಗಳ ಹಿಂದೆ ಪತ್ರಿಕೆಗೆ ಸೇರ್ಪಡೆಗೊಂಡಿದ್ದಾರೆ.

key words : mysore-regional-paper-andolana-umesh.bhatta-joins-associate-editor-media