ಬೆಂಗಳೂರು,ಜು,9,2020(www.justkannada.in): ರಾಜ್ಯದ ಕೋವಿಡ್ ಆಸ್ಪತ್ರೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕರನ್ನ ದಿಢೀರ್ ರಜೆ ಮೇಲೆ ಕಳಿಸಿರುವುದಕ್ಕೆ ಸರ್ಕಾರದ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ, ಕೋವಿಡ್ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ಎಸಗಿದ ಭ್ರಷ್ಟ ಬಿಜೆಪಿ ಸರ್ಕಾರ ಈಗ ಆಸ್ಪತ್ರೆಯ ವೈದ್ಯರನ್ನ ದಿಢೀರ್ ರಜೆ ಮೇಲೆ ಕಳುಹಿಸಿದೆ. ರಾಜ್ಯದ ಕೋವಿಡ್ ಆಸ್ಪತ್ರೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ರನ್ನ ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಲಾಗಿದೆ.
ಕೋವಿಡ್ ಸಮಸ್ಯೆ ಇರುವಾಗಲೇ ನಿರ್ದೇಶಕರನ್ನ ರಜೆಗೆ ಕಳುಹಿಸಿದ್ದು ಯಾಕೆ…? ಏಕಾಏಕಿ ನಿರ್ದೇಶಕರನ್ನ ಬದಲಾಯಿಸೋದು ಏಕೆ..? ಇದರ ಹಿಂದೆ ಯಾರ ಹಿತಾಸಕ್ತಿ ಇದೆ ಸ್ವಾಮಿ..? ರಾಜ್ಯದ ಜನ ಪ್ರಶ್ನೆ ಕೇಳ್ತಿದ್ದಾರೆ ಉತ್ತರಿಸಿ ಎಂದು ಸರ್ಕಾರಕ್ಕೆ ಈಶ್ವರ್ ಖಂಡ್ರೆ ಪ್ರಶ್ನೆ ಹಾಕಿದ್ದಾರೆ.
ಹಾಗೆಯೇ ಆಸ್ಪತ್ರೆಗೆ ಸಂಬಂಧವೇ ಇಲ್ಲದವರನ್ನ ನಿರ್ದೇಶಕರನ್ನಾಗಿಸೋ ಪ್ರಯತ್ನ ನಡೆದಿದೆ. ಸ್ವತಃ ಬೌರಿಂಗ್ ಆಸ್ಪತ್ರೆಯ ವೈದ್ಯರೇ ಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮಾನ್ಯ ಸುಧಾಕರ್ ಅವರೇ ನಿಮ್ಮ ಮೂಗಿನ ಕೆಳಗೆ ಎಲ್ಲಾ ನಡೆಯುತ್ತಾ ಇದ್ರೂ ಏಕೆ ಸುಮ್ಮನ್ನಿದ್ದೀರಿ ಎಂದು ಸಚಿವ ಸುಧಾಕರ್ ಗೆ ಈಶ್ವರ್ ಖಂಡ್ರೆ ಟ್ವಿಟ್ಟರ್ ನಲ್ಲಿ ಚಾಟಿ ಬೀಸಿದ್ದಾರೆ.
Key words: Ishwar Khandre -Outrage –Against- Government- – leave – hospital- director