ಮೈಸೂರು,ಜೂ,3,2019(www.justkannada.in): ಕಾವೇರಿ ನೀರು ನಿರ್ವಹಞಣಾ ಪ್ರಾಧಿಕಾರ ರಚನೆ ಮಾಡಿರುವುಕ್ಕೆ ವಿರೋಧ ವ್ಯಕ್ತಪಡಿಸಿ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಆಗಮಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿರೋಧಿಸಿ ಕರಾಳ ದಿನವೆಂದು ಕಪ್ಪು ಬಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಾಧಿಕಾರ ರಚನೆಯಿಂದ ಕರ್ನಾಟಕದಕ್ಕೆ ಇರಂತರವಾಗಿ ಅನ್ಯಾಯವಾಗುತ್ತದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನವಾಗಿರುವುದು ಒಳ್ಳೆಯದಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರಾಧಿಕಾರ ರಚನೆಗೆ ವಿರೋಧಿ ವ್ಯಕ್ತಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇನ್ನು ಕೇಂದ್ರದ ತ್ರಿಭಾಷಾ ಶಿಕ್ಷಣ ನೀತಿಗೂ ವಿರೋಧ ವ್ಯಕ್ತಪಡಿಸಿದ ವಾಟಾಳ್ ನಾಗಾರಾಜ್. ನಮಗೆ ಹಿಂದಿ ಬೇಡ ಕನ್ನಡ ಸಾಕು. ಕೇಂದ್ರ ಸರ್ಕಾರ ಈ ನೀತಿಯನ್ನ ಜಾರಿಗೆ ತರಬಾರದು. ಈ ನೀತಿಯನ್ನ ನಾವು ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ. ಕೇಂದ್ರ ಸರ್ಕಾರ ಈ ನೀತಿಯನ್ನ ಜಾರಿಗೆ ತಂದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
Key words: Strong opposition to formation of Cauvery Authority. Vatal Nagaraj protest in Mysore.
#mysore #vatalnagaraj #protest #CauveryAuthority