BDA : ಇಲ್ಲಿ ಆಯುಕ್ತರಿಗಿಂತ ಡಾಟಾ ಎಂಟ್ರಿ ಅಪರೇಟರ್ ಗಳೇ ಸೂಪರ್ ಫಾಸ್ಟ್..!

 

ಬೆಂಗಳೂರು, ಜು.10, 2020 : (www.justkannada.in news ) ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA) ಕಚೇರಿಯಲ್ಲಿನ ಕಡತಗಳು ಸಹಿಯಾಗಿ ಆಯುಕ್ತರ ಕೈ ಸೇರುವ ಮುನ್ನವೇ ಗುತ್ತಿಗೆದಾರರ ಮೊಬೈಲ್ ಸೇರುತ್ತಿವೆ.

ಕಚೇರಿಯ ಕಡತಗಳ ಈ ವೇಗಕ್ಕೆ ಅಲ್ಲಿ ಕಾರ್ಯನಿರ್ವಹಿಸುವ ಕೆಲ ಡೇಟಾ ಎಂಟ್ರಿ ಅಪರೇಟರ್ ಗಳ ಭಾರಿ ಆ್ಯಕ್ಟೀವ್ ನೆಸ್ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಆಯುಕ್ತರ ಆದೇಶಕ್ಕೂ ಮುನ್ನವೇ ಈ ಕಡತಗಳು ಖಾಸಗಿ ಡೆವಲಪರ್‌ಗಳ ಕೈಸೇರುತ್ತಿರುವುದೇ ಇದಕ್ಕೆ ಕಾರಣ.
ಈ ಸಲುವಾಗಿಯೇ ಪ್ರಾಧಿಕಾರದಲ್ಲಿನ ಸುಮಾರು 103 ಡಾಟಾ ಎಂಟ್ರಿ ಆಪರೇಟರ್‌ಗಳ ಸ್ಥಳ ಬದಲಾವಣೆ ಮಾಡಲಾಗಿದೆ. ಕೆಲ ಆಪರೇಟರ್‌ಗಳು, ಕಡತಗಳಲ್ಲಿನ ಪ್ರಮುಖ ನೋಟ್‌ಶೀಟ್‌ಗಳನ್ನು ಆದೇಶಕ್ಕೂ ಮೊದಲೇ ಮೊಬೈಲ್‌ನಲ್ಲಿ ಸೆರೆಹಿಡಿದು, ವಾಟ್ಸ್‌ಆ್ಯಪ್‌ ಮೂಲಕ ಡೆವಲಪರ್‌ , ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

jk-logo-justkannada-logo

ಕಡತ ತಿದ್ದುಪಡಿ ಆರೋಪದ ಕಾರಣ, ಡಾಟಾ ಎಂಟ್ರಿ ಆಪರೇಟರ್ ಗಳ ಸ್ಥಾನ ಪಲ್ಲಟಕ್ಕೆ ಆದೇಶ ಹೊರಡಿಸಲಾಗಿದೆ. ಈ ಆದೇಶ ರದ್ದತಿಗೆ ಈಗ ಇನ್ನಿಲ್ಲದ ಕಸರತ್ತು ನಡೆದಿದ್ದು, ಸಾಮಾನ್ಯ ಡಾಟಾ ಎಂಟ್ರಿ ಆಪರೇಟರ್‌ ಗಳು ತಮ್ಮ ಈ ಹಿಂದಿನ ಸ್ಥಾನದಲ್ಲೇ ಉಳಿಯಲು ಲಕ್ಷಾಂತರ ರೂ. ಸುರಿಯಲು ತಯಾರಾಗಿದ್ದಾರೆ. ಅಷ್ಟೇ ಅಲ್ಲ, ರಾಜಕೀಯ ಮುಖಂಡರಿಂದಲೂ ಈ ಬಗ್ಗೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ.
ಎರಡು ವರ್ಷಗಳಿಗೊಮ್ಮೆ ಅಧಿಕಾರಿಗಳೇ ಬದಲಾಗುತ್ತಾರೆ. ಆದರೆ, ನಗರ ಯೋಜನೆ, ಭೂಸ್ವಾಧೀನ ಸೇರಿದಂತೆ ಬಿಡಿಎ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು ಮಾತ್ರ ಆಯಕಟ್ಟಿನ ಜಾಗಗಳಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವುದೂ ಆಶ್ಚರ್ಯಕ್ಕೆ ಕಾರಣವಾಗಿದೆ.

Karnataka-Bangalore/data-entry-operators-behind-the-leak-in-BDA

ಹೊರಗುತ್ತಿಗೆ ಪಡೆದ ಕಂಪನಿಗಳ ಅವಧಿ ಬಹುತೇಕ ಮುಗಿದಿದೆ. ಆದರೂ, ಒಂದೂವರೆ-ಎರಡು ವರ್ಷಗಳಿಂದ ತಾತ್ಕಾಲಿಕ ಅವಧಿ ವಿಸ್ತರಣೆಯೊಂದಿಗೆ ಮುಂದುವರಿಯುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

oooo

key words : Karnataka-Bangalore/data-entry-operators-behind-the-leak-in-BDA