ಬೆಂಗಳೂರು, ಜುಲೈ 14, 2020 (www.justkannada.in): ಇನ್ನು ಒಂದು ತಿಂಗಳ ಕಾಲ ಶೂಟಿಂಗ್ ಪ್ರಾರಂಭಿಸದಿರಲು ಕೆಜಿಎಫ್ ಟೀಂ, ನಿರ್ಧರಿಸಿದೆ.
ಕೆಜಿಎಫ್-2 ಚಿತ್ರದ 20 ದಿನಗಳ ಶೂಟಿಂಗ್ ಮಾತ್ರ ಬಾಕಿಯಿದೆ. ಲಾಕ್ಡೌನ್ ಶುರುವಾದ ದಿನದಿಂದಲೂ ಶೂಟಿಂಗ್ಗೆ ಬ್ರೇಕ್ ಬಿದ್ದಿತ್ತು. ಆದರೆ, ಕೆಲ ದಿನಗಳ ಹಿಂದೆಯಷ್ಟೆ ಅರ್ಧಕ್ಕೆ ನಿಂತಿರುವ ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿತ್ತು.
ಇದೀಗ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಾಗೂ ಸರ್ಕಾರ ನಗರದಲ್ಲಿ ಒಂದು ವಾರ ಲಾಕ್ಡೌನ್ ಘೋಷಿಸಿರೋದು ಚಿತ್ರತಂಡ ಶೂಟಿಂಗ್ ಮುಂದೂಡಲು ನಿರ್ಧರಿಸಿದೆ.
ಅಕ್ಟೋಬರ್ 23ಕ್ಕೆ ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿದೆ. ಆದರೆ ಇದು ಸಾಧ್ಯವಾಗೋದು ಡೌಟು!