ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸಹಕಾರ ನೀಡುತ್ತಿಲ್ಲ : ಸಚಿವ ಆರ್.ಅಶೋಕ್ ನೋವಿನ ನುಡಿ.

 

ಮೈಸೂರು, ಜು.15, 2020 : (www.justkannada.in news ) : ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ಮುಖಂಡರು ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ನೋವಿನಿಂದ ಹೇಳಿದರು.
ಮೈಸೂರಿನ ಸರಕಾರಿ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು ಹೇಳಿದಿಷ್ಟು…

ಕೊರೋನ ಸಂದರ್ಭದಲ್ಲಿ ಕಾಂಗ್ರೆಸ್ ಅನಗತ್ಯ ರಾಜಕೀಯ ಮಾಡ್ತಿದೆ. ಲೆಕ್ಕಕೊಡಿ ಎಂದು ಸಿದ್ದರಾಮಯ್ಯನವರು ಕೇಳಬೇಕಿಲ್ಲ. ಕೋವಿಡ್ ಲೆಕ್ಕವನ್ನ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ತಲುಪಿಸ್ತೀವಿ. ಪ್ರತಿಯೊಬ್ಬ ಸಾರ್ವಜನಿಕರಿಗೂ ಲೆಕ್ಕ ಸಿಗುತ್ತೆ. ಕೊವಿಡ್ ಲೆಕ್ಕದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ.

jk-logo-justkannada-logo

ಭ್ರಷ್ಟಾಚಾರ ನಡೆಯೋದಕ್ಕೆ ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಇಡೀ ದೇಶಕ್ಕೆ ಗೊತ್ತು. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಯಾವುದೇ ಕಳಂಕ ಇಲ್ಲದೆ ಅಧಿಕಾರ ನಡೆಸುತ್ತಿದ್ದಾರೆ.
ಕೋವಿಡ್‌ ಸಮರದಲ್ಲಿ ವಿಪಕ್ಷಗಳು ಸಹಕಾರ ಕೊಡುತ್ತಿಲ್ಲ. ರಾಜ್ಯದಲ್ಲಿ ಈವರೆಗೆ 400 ರಿಂದ 500 ಕೋಟಿ ಮಾತ್ರ ಖರ್ಚಾಗಿದೆ. 2 ಸಾವಿರ ಕೋಟಿ ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆರ್.ಅಶೋಕ್ ಪ್ರಶ್ನೆ.

ಹಾಸಿಗೆ, ದಿಂಬು ಖರೀದಿಯಲ್ಲಿ ಅವ್ಯವಹಾರ ಆರೋಪ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಅಶೋಕ್ ತಿರುಗೇಟು. ಹಾಸಿಗೆ ದಿಂಬನ್ನ ನಾವು ಇನ್ನೂ ಖರಿದಿಯೇ ಮಾಡಿಲ್ಲ. ಇನ್ನೂ ಅವ್ಯವಹಾರ ಎಲ್ಲಿ ಬಂತು..!

Mysore-bjp-minister-r.ashok-congress-not-cooperative-to-control-covid-in-Karnataka

ನಾನು ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಕೋವಿಡ್ ನಿಯಂತ್ರಣದಲ್ಲಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸಹಕಾರ ಕೊಡುತ್ತಿಲ್ಲ. ಕಾಂಗ್ರೆಸ್‌ನಿಂದ ನಾವು ಈ ರೀತಿಯ ನಡವಳಿಕೆಯನ್ನ ನಿರೀಕ್ಷಿಸಿರಲಿಲ್ಲ. ಮೈಸೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ.

 

ooooo

key words : Mysore-bjp-minister-r.ashok-congress-not-cooperative-to-control-covid-in-Karnataka