ಬೆಂಗಳೂರು,ಜು,16,2020(www.justkannada.in): ರಾಜ್ಯ ರಾಜಧಾನಿ ಬೆಂಗಳೂರು ಕೊರೋನಾ ವೈರಸ್ ನಿಂದ ತತ್ತರಿಸಿದ್ದು ಈಗಾಗಲೇ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಇಂದು ಕೊರೋನಾಗೆ ಪೌರಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.
28 ವರ್ಷದ ಕೊರೋನಾ ಸೋಂಕಿತ ಮಹಿಳೆ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಸೋಂಕಿತ ಮಹಿಳೆ ನಾಗೇನಹಳ್ಳಿ ವಾರ್ಡ್ ನ ಪೌರಕಾರ್ಮಿಕರಾಗಿದ್ದು ನಿನ್ನೆ ಮಹಿಳೆಗೆ ಕೊರೋನಾ ಸೋಂಕು ದೃಢವಾಗಿತ್ತು. ಹೀಗಾಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲು ಪೌರಕಾರ್ಮಿಕ ಒಕ್ಕೂಟದ ಮುಖಂಡರು ವಿಕ್ರಂ ಆಸ್ಪತ್ರೆ ಮತ್ತು ರಾಮಯ್ಯ ಆಸ್ಪತ್ರೆ ಸಂಪರ್ಕಿಸಿದ್ದರು.
ಆದರೆ ಇಲ್ಲಿ ಬೆಡ್ ಇಲ್ಲ ಎಂದು ತಿಳಿಸಿದ್ದು ಹೀಗಾಗಿ ಸೋಂಕಿತ ಮಹಿಳೆಯನ್ನ ಅಂಬೇಡ್ಕರ್ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಇಂದು ಬೆಳಿಗ್ಗೆ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Key words: women-death- corona -Bangalore.