ಬೆಂಗಳೂರು,ಜು,16,2020(www.justkannada.in): ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಕೋವಿಡ್ ಶಂಕಿತರ ಮಾದರಿಗಳ ಪರೀಕ್ಷೆ ಸದ್ಯ ದಿನಕ್ಕೆ 250 ಆಗುತ್ತಿದ್ದು ಅದನ್ನು 1,000 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಯಿತು.
ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರು ಇರೊಫಿನ್ಸ್ ಕ್ಲಿನಿಕಲ್ ಜೆನೆಟಿಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾನಷು ಶ್ರೀವಾಸ್ತವ ಅವರ ಜತೆ ಇಂದು ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಈ ಕುರಿತು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಇರೊಫಿನ್ಸ್ ಸಂಸ್ಥೆ, ಮಾದರಿಗಳ ಪರೀಕ್ಷೆ ಸಾಮರ್ಥ್ಯವನ್ನು 250 ರಿಂದ 1000ಕ್ಕೆ ಹೆಚ್ಚಿಸಿಕೊಂಡಿದ್ದು, ನಾಳೆಯಿಂದಲೇ ಈ ಕೆಲಸ ಮಾಡಲಿದೆ ಎಂದು ಹೇಳಿದರು. ಪಶ್ಚಿಮ ವಲಯದಲ್ಲಿ ಆರು ವಿಧಾನಸಭಾ ಕ್ಷೇತ್ರಗಳು ಇದ್ದು ತಲಾ 150 ಮಾದರಿಗಳನ್ನು ಹೆಚ್ಚುವರಿಯಾಗಿ ಪರೀಕ್ಷೆ ಮಾಡಲಾಗುವುದು. ಇದು ತ್ವರಿತವಾಗಿ ಚಿಕಿತ್ಸೆ ನೀಡಲು ಅನುಕೂಲ ಆಗುತ್ತದೆ ಎಂದರು.
ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
Key words: BBMP -West Zone- increase – Covid test – thousand-DCM- ashwath narayan