ಬೆಂಗಳೂರು,ಜೂ,4,2019(www.justkannada.in): ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಅರಣ್ಯಾಧಿಕಾರಿಗಳ ಜೀಪುಗಳ ಬಳಕೆ ಮಾಡದಂತೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಸಫಾರಿಗೆ ಅರಣ್ಯಾಧಿಕಾರಗಳ ವಾಹನ ಬಳಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಹುಲಿ ಸಂರಕ್ಷಿತಾ ಪ್ರದೇಶ, ರಾಷ್ಟ್ರೀಯ ಉದ್ಯಾನವನಗಳು, ವನ್ಯಧಾಮಗಳಲ್ಲಿ ಸಫಾರಿಗಾಗಿಯೇ ವಾಹನಗಳನ್ನು ಬಳಸಲಾಗುತ್ತಿದೆ. ಆದರೆ ಕೆಲವು ಕಡೆಗಳಲ್ಲಿ ಎಸಿಎಫ್, ಆರ್ಎಫ್ಒ ಜೀಪ್ ಗಳನ್ನ ಬಳಸಿಕೊಂಡು ಹಣ ಪಡೆಯುತ್ತಿರುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಬೇರೆ ವಾಹನಗಳಲ್ಲಿ ಸಫಾರಿಗೆ ಕಳುಹಿಸಬಾರದೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಖಡಕ್ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಿಸಿಸಿಎಫ್ ಪುನಟಿ ಶ್ರೀಧರ್ ಎಚ್ಚರಿಕೆ ನೀಡಿದ್ದಾರೆ.
Key words: Forest Department restricting use of other vehicles other than vehicles assigned to Safari.
#ForestDepartment #restricting #vehicles #Safari.