ಮೈಸೂರು,ಜು, 24,2020(www.justkannada.in): ಕೊರೋನಾ ಹಿನ್ನೆಲೆ ಲಾಕ್ ಡೌನ್ ನಿಂದ ನಮಗೂ ಸಾಕಷ್ಟು ತೊಂದರೆಯಾಗಿದೆ. ಆದರೆ ನಾವು ಪರಿಹಾರ ನೀಡಿ ಎಂದು ಕೇಳುತ್ತಿಲ್ಲ. ಜಿಮ್ ಓಪನ್ ಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಅಂತರ ಜಿಲ್ಲಾ ಜಿಮ್ ಅಸೋಸಿಯೇಷನ್ ಅಧ್ಯಕ್ಷ ಅವಿನಾಶ್ ಮನವಿ ಮಾಡಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅಂತರ ಜಿಲ್ಲಾ ಜಿಮ್ ಅಸೋಸಿಯೇಷನ್ ಅಧ್ಯಕ್ಷ ಅವಿನಾಶ್, ರಾಜ್ಯದಲ್ಲಿ ಎಲ್ಲಾ ವ್ಯವಹಾರಕ್ಕೂ ಅವಕಾಶ ನೀಡಲಾಗಿದೆ. ಆದ್ರೆ ಜಿಮ್ ಓಪನ್ ಮಾಡಲು ಅವಕಾಶ ನೀಡಿಲ್ಲ. ನಾವು ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಲಕ್ಷಾಂತರ ರೂ ಬಂಡವಾಳ ಹಾಕಿದ್ದೇವೆ. ನಮಗೆ ಸಾಕಷ್ಟು ತೊಂದರೆ ಆಗಿದೆ. ನಾವು ಸರ್ಕಾರದಿಂದ ಪರಿಹಾರ ನೀಡಿ ಎಂಬುದನ್ನ ಕೇಳುತ್ತಿಲ್ಲ. ಜಿಮ್ ಓಪನ್ ಮಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.
ವ್ಯಾಯಮ ಮಾಡೋದ್ರಿಂದ ಕೊರೊನಾ ಬರುತ್ತಾ. ? ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಅವಿನಾಶ್ , ಬೇರೆ ಎಲ್ಲಾ ಕ್ಷೇತ್ರಕ್ಕೂ ಅವಕಾಶ ಕೊಟ್ಟಿದ್ದೀರಿ. ನಮಗೇಕೆ ಹೀಗೆ ಮಾಡ್ತಾ ಇದೀರಿ. ಜಿಮ್ ಮುಚ್ಚಿ ನಮ್ಮ ಜೀವನ ಮಾಡೋದು ಹೇಗೆ.? ಸರ್ಕಾರವೇ ನಮಗೆ ಪರ್ಯಾಯ ಮಾರ್ಗ ಸೂಚಿಸಬೇಕು. ನಾವೂ ಕೂಡ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳತ್ತೇವೆ. ನಮಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನಾವೇ ಅನಿವಾರ್ಯವಾಗಿ ಜಿಮ್ ಓಪನ್ ಮಾಡ್ತೇವೆ. ನಾವು ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರುಗೂ ಮನವಿ ಮಾಡಿ ಸಾಕಾಗಿದೆ ಎಂದು ಅವಿನಾಶ್ ಬೇಸರ ವ್ಯಕ್ತಪಡಿಸಿದರು.
Key words: gym- open -Request – Inter District Gym Association- mysore