ಮೈಸೂರು,ಜು,25,2020(www.justkannada.in): ಇಂದು ಎಲ್ಲೆಡೆ ನಾಗ ಪಂಚಮಿ ಸಂಭ್ರಮವಾಗಿದ್ದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಕ್ತರು ನಾಗರಾಜನಿಗೆ ಹಾಲನೆರೆದು ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡುವಂತೆ ಪ್ರಾರ್ಥಿಸಿದರು.
ನಾಗಪಂಚಮಿ ಹಿನ್ನೆಲೆ ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆಯಿಂದಲೇ ನಾಗರಾಜನಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿತು. ಇದೇ ವೇಳೆ ಭಕ್ತರು ನಾಗರಾಜನಿಗೆ ಹಾಲೆರೆದು ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವಂತೆ ಪ್ರಾರ್ಥಿಸಿದರು.
ಇನ್ನು ಪ್ರತಿ ವರ್ಷ ಅಮೃತೇಶ್ವರ ದೇವಾಲಯಕ್ಕೆ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆದರೆ ಈ ಬಾರಿ ಕೊರೋನಾ ಆತಂಕದಿಂದ ಬೆರಳೆಣಿಕೆಯಷ್ಟು ಮಾತ್ರ ಭಕ್ತರು ಭಾಗಿಯಾಗಿದ್ದರು. ಮಾಸ್ಕ್ ಧರಿಸಿಯೇ ಭಕ್ತರು ನಾಗದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.
Key words: Nagpanchami -celebration – Mysore-Devotees – worshipe