#BANDIPURA : ಬಂಡೀಪುರ ಬಳಿ ಮತ್ತೆರೆಡು ಹೊಸ ಸಫಾರಿ ಜೋನ್ ಗೆ ಪ್ರಸ್ತಾವನೆ.

 

ಚಾಮರಾಜನಗರ, ಜು.25, 2020 : (www.justkannada.in news) ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೊಸದಾಗಿ ಮತ್ತೆರಡು ‘ಸಫಾರಿ ಜೋನ್‌ ‘ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ನುಗು ಅರಣ್ಯ ಮತ್ತು ಗುಂಡ್ರೆ ಅರಣ್ಯ ವಲಯದಲ್ಲಿ ಈ ನೂತನ ಸಫಾರಿಗೆ ಅರಣ್ಯ ಇಲಾಖೆ ಮುಂದಾಗಿದ್ದು, ಈ ಸಂಬಂಧ ರಾಜ್ಯ ಸರಕಾರಕ್ಕೆ ಹಿರಿಯ ಅಧಿಕಾರಿಗಳು ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಅಷ್ಟರಲ್ಲಿ ಕರೋನಾ ವೈರಾಣು ದಾಳಿಯಿಂದ ಸಂಕಷ್ಠ ಎದುರಾದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಮುಂಚೂಣಿಗೆ ಬಂದಿರಲಿಲ್ಲ ಎನ್ನಲಾಗಿದೆ.

bandipura-safari-zone-nugu-gundre-forest-tiger-black-panther

ಬಂಡೀಪುರ ಅಭಯಾರಣ್ಯದ ಕಂಪ್ಲೀಟ್ ಸೊಬಗನ್ನು ಮತ್ತಷ್ಟು ಸವಿಯಲು ಈ ಎರಡು ನೂತನ ಸಫಾರಿ ಜೋನ್ ಗಳು ನೆರವಾಗಲಿವೆ. ಹುಲಿ, ಆನೆ, ಚಿರತೆ, ಬ್ಲಾಕ್ ಫ್ಯಾಂಥರ್, ಸಾಂಬಾರು, ಜಿಂಕೆ..ಮುಂತಾದ ವನ್ಯಜೀವಿಗಳ ಹಿಂಡೇ ಇಲ್ಲಿ ನೆಲೆಸಿದೆ. ಕಬಿನಿ ಹಿನ್ನಿರಿನಲ್ಲಿನ ಈ ಅರಣ್ಯ ಪ್ರದೇಶದಲ್ಲಿ ‘ ಬೋಟ್ ಸಫಾರಿ; ಆರಂಭಿಸಲು ಉದ್ದೇಶಿಸಲಾಗಿದೆ.

bandipura-safari-zone-nugu-gundre-forest-tiger-black-panther

ಜತೆಗೆ 31 ಸ್ಕ್ವಯರ್ ಕಿಲೋ ಮೀಟರ್ ವ್ಯಾಪ್ತಿಯ ನುಗು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬ್ಲ್ಯಾಕ್ ಫ್ಯಾಂಥರ್ (ಕಪ್ಪು ಚಿರತೆ) ವಾಸಿಸುತ್ತಿರುವ ಕಾರಣ, ಇದನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಈ ಸಫಾರಿ ಜೋನ್ ರಸದೌತಣ ನೀಡಲಿದೆ.

ooooo

key words : bandipura-safari-zone-nugu-gundre-forest-tiger-black-panther