ಮೈಸೂರು, ಜು.28, 2020 : (www.justkannada.in news) : ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿರುವ “ಝುಸ್ ಆಫ್ ಕರ್ನಾಟಕ” ಮೊಬೈಲ್ ಆ್ಯಪ್ ನಾಳೆ ( ಜುಲೈ 29) ಲೋಕಾರ್ಪಣೆ ಗೊಳ್ಳಲಿದೆ.
ಕರ್ನಾಟಕದ ಅರಣ್ಯ ಮತ್ತು ಪರಿಸರ ಸಚಿವ ಬಿ.ಎಸ್. ಆನಂದಸಿಂಗ್ ಹಾಗೂ ಅತಿಥಿಯಾದ ಮೈಸೂರು ರಾಜವಂಶಸ್ಥ ಯದುವೀರಕೃಷ್ಣದತ್ತ ಒಡೆಯರ್ ಅವರು ಬುಧವಾರ ಬೆಳಗ್ಗೆ 11ಕ್ಕೆ ಆನ್ ಲೈನ್ ಮೂಲಕ ವಿಶ್ವ ಹುಲಿ ದಿನದ ಸವಿನೆನಪಿನಲ್ಲಿ ಉದ್ಘಾಟಿಸುವರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿರುವ ಈ ಮೊಬೈಲ್ ಆ್ಯಪ್ ರಾಜ್ಯದ 9 ಮೃಗಾಯಲಗಳ ಕುರಿತು ಮಾಹಿತಿ, ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ, ದೇಣಿಗೆ ನೀಡಲು ಅವಕಾಶ ಕಲ್ಪಿಸಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಬಯಸುವವರು https://meet.google.com/fik-xrnb-hfw ಲಿಂಕ್ ಮೂಲಕ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ನಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ತಿಳಿಸಿದ್ದಾರೆ.
ooooo
key words : Mysore-zoo-mobile-app-release-zoos.of.karnatka
ENGLISH SUMMARY :
Minister for Forest, Environment & Ecology, Government of Karnataka Anand Singh and Guest of Honour Yaduveer Krishnadatta Chamarajendra Wodeyar, Maharaja of Mysuru will be dedicating ” Zoos of Karnataka” mobile app of Zoo Authority of Karnataka to public at 11.00 am on 29.03.2020 on the occasion of World Tiger Day. This app will be useful in online animal adoption and donation to all the 9 Zoos of Karnataka. It will be virtual event and all are requested to join virtually through smartphone or laptops. Please click the link https://meet.google.com/fik-xrnb-hfw to watch live inauguration programme.