ಮೈಸೂರು,ಜು,30,2020(www.justkannada.in): ರಾಜ್ಯದಲ್ಲಿ ಅನೈತಿಕ ರಾಜಕಾರಣ ಸೃಷ್ಠಿಯಾಗಿದ್ದು ಬಿಎಸ್ ಯಡಿಯೂರಪ್ಪ ಅವರಿಂದ ಅಕ್ರಮ ಹಣದಿಂದ ಎಂಎಲ್ ಎ ಗಳನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಇದು ಬಿಎಸ್ವೈ ಸರ್ಕಾರದ ವರ್ಷಧ ಸಾಧನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಢಿದ ಮಾಜಿ ಸಿಎಂ ಸಿದ್ಧರಾಮಯ್ಯ, ಯಡಿಯೂರಪ್ಪ ಬಹಳ ವಿಜೃಂಭಣೆಯಿಂದ ವರ್ಷದ ಸಂಭ್ರಮ ಆಚರಿಸಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲೂ ಜಾಹಿರಾತು ನೀಡಿ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ, ಖಾಲಿಡಬ್ಬ ಮಾತ್ರಶಬ್ದ ಮಾಡುವುದು ಎಂಧು ಬಿಜೆಪಿ ಸರ್ಕಾರವನ್ನ ಖಾಲಿ ಡಬ್ಬಕ್ಕೆ ಹೋಲಿಸಿದರು.
ಬಿಎಸ್ವೈ ವರ್ಷದ ಸಾಧನೆ ಕೈಪಿಡಿ ಬಿಡುಗಡೆ ಮಾಡಿದ್ದಾರೆ. ಅದರ ಜೊತೆಗೆ ಚುನಾವಣಾ ಪ್ರಣಾಳಿಕೆಗಳನ್ನು ಸೇರಿಸಬೇಕಿತ್ತು. ಆಗ ನಿಜವಾದ ಸಾಧನೆ ಗೊತ್ತಾಗುತ್ತಿತ್ತು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.
ಬಿಜೆಪಿ ಸರ್ಕಾರ ಅನೈತಿಕವಾಗಿ ಬಂದಿರುವಂತಹದ್ದು. ಜನರ ಆಶಿರ್ವಾದ ಪಡೆದು ಬಂದ ಸರ್ಕಾರ ಇದಲ್ಲ. ಇವರಿಗೆ ಬಹುಮತ ಬಂದಿರಲಿಲ್ಲ, ಬಿಜೆಪಿ ಗೆದ್ದುದ್ದು 104 ಸ್ಥಾನಗಳು ಮಾತ್ರ. ಬಹುಮತ ಸಾಬೀತು ಮಾಡಲು ಇವರಿಗೆ ಅವಕಾಶ ಇರಲಿಲ್ಲ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದಾರೆ. ರಾಜ್ಯದಲ್ಲಿ ಅನೈತಿಕ ರಾಜಕಾರಣ ಸೃಷ್ಠಿಯಾಗಿದ್ದು ಬಿಎಸ್ವೈ ಇಂದ ಅಕ್ರಮ ಹಣದಿಂದ ಎಂಎಲ್ ಎ ಗಳನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಇದು ಬಿಎಸ್ವೈ ಸರ್ಕಾರದ ವರ್ಷಧ ಸಾಧನೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.
ಆಕ್ರಮ ಹಣದಲ್ಲಿ ನಮ್ಮ 14 ಶಾಸಕರು, ಜೆಡಿಎಸ್ ನ ಮೂವರನ್ನ ಖರೀದಿ ಮಾಡಿದ್ರು. ಈಗ ರಚನೆಯಾಗಿರುವ ಸರ್ಕಾರ ಒಂದು ಅನೈತಿಕ ಕೂಸು. ಇವರಿಗೆ ಸಂವಿಧಾನ ಬಗ್ಗೆ ಗೌರವ ಇಲ್ಲ. ಅಕ್ರಮವಾಗಿ ಮಾಡಿರುವ ಹಣದಿಂದ ಆಪರೇಷನ್ ಮಾಡಿದ್ದಾರೆ. ಅವತ್ತು ಶ್ರೀನಿವಾಸ ಗೌಡ ಅಸೆಮ್ಲಿಯಲ್ಲೇ ಹೇಳಿದ್ರು. ನನ್ನ ಮನೆಗೆ 5ಕೋಟಿ ತಂದು’ ಮುಂದೆ 20ಕೋಟಿ ಕೊಡ್ತಿವಿ ಎಂದಿದ್ರು ಅಂತ. ಇದನ್ನ ವಿಧಾನಸಭೆಯಲ್ಲಿ ಖುದ್ದು ಶ್ರೀನಿವಾಸ್ ಗೌಡರೆ ಹೇಳಿದ್ರು. ಇವರಿಗೆ ಇಷ್ಟೇಲ್ಲ ಕೊಡಲು ಹಣ ಹೇಗೆ ಬಂತು.? ಇದೆಲ್ಲಾ ಅಕ್ರಮವಾಗಿ ಮಾಡಿರೋ ಹಣದಿಂದ ಕೊಟ್ಟಿದ್ದಾರೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.
Key words: BS yeddyurappa -creator -immoral politics – Former CM -Siddaramaiah -mysore