ಮೈಸೂರು, ಆಗಸ್ಟ್ 02, 2020 (www.justkannada.in): ರೈಲ್ವೆ ಖಾಸಗೀಕರಣ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.
ನಗರದ ರೈಲ್ವೆ ಸ್ಟೇಷನ್ ಮುಂದೆ ಎಐಯುಟಿಯುಸಿ ಇಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರದಕಾರ ವಿರುದ್ಧ ಧಿಕ್ಕಾರ ಕೂಗಿ ಎಐಯುಟಿಯುಸಿ ಕಾರ್ಯಕರ್ತರು. ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರಿಗೆ ಸಂಸ್ಥೆಗಳ ಖಾಸಗೀಕರಣಕ್ಕೆ ಖಂಡನೆ ವ್ಯಕ್ತಪಡಿಸಿದ ಪ್ರತಿಭಟನಾಕಾರರು. ರೈಲ್ವೆ ಇಂದ ಸಾಕಷ್ಟು ಪ್ರಮಾಣದ ಉದ್ಯೋಗ ಸೃಷ್ಠಿಯಾಗಿದೆ. ಇದನ್ನ ಖಾಸಗೀಕರಣ ಮಾಡಿದ್ರೆ ಉದ್ಯೋಗ ನಷ್ಟವಾಗಲಿದೆ ಎಂದು ದೂರಿದರು.
ಕೊರೊನಾ ಸಂದರ್ಭದಲ್ಲಿ ಕೇಂದ್ರದ ಈ ರೀತಿಯ ನಿರ್ಧಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾರ್ಮಿಕ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದೆ. ಕೂಡಲೇ ರೈಲ್ವೆ ಖಾಸಗೀಕರಣ ಯೋಜನೆ ನಿಲ್ಲಬೇಕು. ಅನಾವಶ್ಯಕವಾಗಿ ಕಾಯ್ದೆ ತಿದ್ದುಪಡಿ ಮಾಡಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದರು.