ಮೈಸೂರು,ಆ,3,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಪಾಸಿಟಿವ್ ರಾಂಗ್ ನಂಬರ್ ಕೇಸ್ ಗಳು ಹೆಚ್ಚಾಗುತ್ತಿದ್ದು, ಇದುವರೆಗೆ 230 ಮಂದಿ ಕೊರೋನಾ ಸೋಂಕಿತರು ರಾಂಗ್ ನಂಬರ್ ನಮೂದು ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ , ಇದುವರೆಗೆ 230 ಮಂದಿ ರಾಂಗ್ ನಂಬರ್ ನಮೂದು ಮಾಡಿದ್ದಾರೆ. 230 ಜನಕ್ಕೂ ಪಾಸಿಟಿವ್ ಇದೆ. ನಿಮ್ಮ ರೀಪೋರ್ಟ್ ಪಾಸಿಟಿವ್ ಬಂದಿದೆ ಅಂತಾ ಕರೆ ಮಾಡಿದಾಗ ರಾಂಗ್ ನಂಬರ್ ಎಂದು ಪತ್ತೆಯಾಗಿದೆ. ಕೆಲವರು ರಾಂಗ್ ನಂಬರ್ ಕೊಟ್ಟರೇ, ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ರಾಂಗ್ ನಂಬರ್ ಕೊಟ್ಟವರ ಪತ್ತೆಯೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಇಂದಿನಿಂದ ಮೈಸೂರಲ್ಲಿ ತಳ್ಳು ಗಾಡಿಯಲ್ಲಿ ತರಕಾರಿ ಮಾರುವವರು ಮತ್ತು ಪಾನಿಪುರಿ ಅಂಗಡಿಯವರಿಗೆ ರಾಂಡಂ ಟೆಸ್ಟ್ ಮಾಡಲಾಗುತ್ತದೆ. ತರಕಾರಿ ಮಾರುವವರಿಂದ ಸೋಂಕು ಹರಡುವುದು ಹೆಚ್ಚಾಗುತ್ತಿದೆ ಎಂಬ ಮಾಹಿತಿ ಇದೆ. ಎಪಿಎಂಸಿ ಮಾರುಕಟ್ಟೆ ಸೇರಿ ಎಲ್ಲಾ ಮಾರುಕಟ್ಟೆಯ ವ್ಯಾಪಾರಸ್ಥರು ಹಾಗೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಟೆಸ್ಟ್ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
Key words: Wrong number -entry – 230- infected- coronavirus – Mysore.