ಅಯೋಧ್ಯೆ,ಆ,4,2020(www.justkannada.in): ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಅಮೃತ ಯೋಗ, ಭದ್ರ ತಿಥಿ, ಸಿದ್ಧ ಯೋಗ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.
500 ವರ್ಷಗಳ ನಂತರ ರಾಮ ಮಂದಿರ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿದ್ದು ಪ್ರಧಾನಿ ಮೋದಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಅಯೋಧ್ಯೆಯ ರಾಮಮಂದಿರ ಗರ್ಭಗುಡಿ ಸ್ಥಾನದಲ್ಲಿ ಶಿಲಾನ್ಯಾಸಕ್ಕೆ 5 ಇಟ್ಟಿಗೆಗಳನ್ನ ಬಳಕೆ ಮಾಡಲಾಗಿತ್ತು. ನಂದಾ, ಭದ್ರಾ, ಜಯಾ, ರಿಕ್ತಾ, ಪೂರ್ಣ ಹೆಸರಿನ 5 ಇಟ್ಟಿಗೆ ಇಟ್ಟು ಪ್ರಧಾನಿ ಮೋದಿ ಪೂಜೆ ನೆರವೇರಿಸಿದರು.
ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಸಾಧುಸಂತರ ಸಮ್ಮುಖದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಸ್ತದಿಂದ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. ಬಳಿಕ ಶಿಲನ್ಯಾಸ ಸ್ಥಳಕ್ಕೆ ಪ್ರಧಾನಿ ಮೋದಿ ನಮಸ್ಕರಿಸಿದರು. ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಸಾಧುಸಂತರು ಭೂಮಿಪೂಜೆಗೆ ಸಾಕ್ಷಿಯಾದರು.
ಶಿಲನ್ಯಾಸಕ್ಕೂ ಮೊದಲು ಪ್ರಧಾನಿ ಮೋದಿ ಅಯೋಧ್ಯೆಯ ಶ್ರೀ ಹನುಮಾನ್ ಗಡಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Key words: construction – Ram Mandir –Ayodhya-Prime Minister -Narendra Modi