ನವದೆಹಲಿ,ಆ,7,2020(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರಿ ಬದಲಾವಣೆಯಾಗಲಿದ್ದು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ನಾನು ಬದ್ಧನಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಹೊಸ ಶಿಕ್ಷಣ ನೀತಿ ಬಗ್ಗೆ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರು – ನಾಲ್ಕು ವರ್ಷಗಳ ಸುದೀರ್ಘ ಚರ್ಚೆ ನಂತ್ರ ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ. ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಅನಿವಾರ್ಯವಾಗಿದೆ . ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಖಚಿತ. ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಭೇದ ಭಾವ ಇಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣ ಸುಧಾರಣೆಯಾಗಲಿದೆ. ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು.
10 + 2 ಶಾಲಾ ವ್ಯವಸ್ಥೆಯನ್ನು 5 + 3 + 3 + 4 ಗೆ ಬದಲಾಯಿಸಿರುವುದು ನಮ್ಮ ಮಕ್ಕಳಿಂದ ಹೆಚ್ಚು ಜಾಗತೀಕೃತ ನಾಗರಿಕರನ್ನು ಹೊರಹಾಕುವ ಒಂದು ಹೆಜ್ಜೆ. ಇದಕ್ಕಾಗಿಯೇ ಎನ್‌ಇಪಿ 2020 ಮಕ್ಕಳನ್ನು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕು ಎಂದು ಹೇಳುತ್ತದೆ ಇದರಿಂದ ಭವಿಷ್ಯದಲ್ಲಿ ಅವರ ಮೂಲವು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಮೋದಿ ಹೇಳಿದರು.
ಹೊಸ ಶಿಕ್ಷಣ ನೀತಿ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಜನರ ಸಹಕಾರ ಅಗತ್ಯ. ಶಿಕ್ಷಕರು ಪೋಷಕರು ವಿದ್ಯಾರ್ಥಿಗಳ ಸಹಕಾರ ಬೇಕು. ನಮ್ಮ ಯುವಜನತೆಗೆ ಅಗತ್ಯವಿರುವ ಕೌಶಲ್ಯದತ್ತ ಗಮನ ಹರಿಸಲಾಗುತ್ತದೆ. ಕೌಶಲ್ಯಯುತ ಶೀಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಹೊಸ ಶಿಕ್ಷಣ ನೀತಿ ಭಾರತವನ್ನ ಮತ್ತಷ್ಟು ಬಲಿಷ್ಟಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಲ್ಲಿ ಅಂತರಾಷ್ಟೀಯ ಮಟ್ಟದ ಶಿಕ್ಷಣ ಮಕ್ಕಳ ಭವಿಷ್ಯ ನಿರ್ಮಾಣವಾಗುವಂತಹ ಶಿಕ್ಷಣ ನೀಡಬೇಕು. 5ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತದೆ. ನವ ಭಾರತಕ್ಕೆ ಹೊಸ ಶಿಕ್ಷಣ ನೀತಿ ಅಡಿಪಾಯವಾಗಲಿದೆ. ಡಿಬೆಟ್ ಡಿಸ್ಕಷನ್ , ಅವಲೋಕನ, ಅನಾಲಿಸಿಸ್ ನಂತಹ ವ್ಯವಸ್ಥೆ ಇರಬೇಕು. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿಯ ಇದೆಯೋ ಅದನ್ನೆ ಅಧ್ಯಯನ ಮಾಡಲು ಶಿಕ್ಷಣ ನೀತಿಯಲ್ಲಿ ಅವಕಾಶ ಇರುತ್ತದೆ. ಟ್ಯಾಲೆಂಟ್ ಮತ್ತು ಟೆಕ್ನಾಲಜಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಸದ್ಯ ಓದುತ್ತಿರುವ ಕೋರ್ಸ್ ಬಗ್ಗೆ ಆಸಕ್ತಿ ಇಲ್ಲವಾದರೇ ಕೋರ್ಸ್ ಬದಲಾಯಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಮಧ್ಯೆ ಕೋರ್ಸ್ ಬದಲಾಯಿಸಬಹುದು ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: Commit- implement- new -education policy-Prime Minister -Narendra Modi.