ಮೈಸೂರು,ಆ,11,2020(www.justkannada.in): ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ ಅರ್ಧ ಅಡಿ ಮಾತ್ರ ಬಾಕಿ ಇದೆ.
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರಿ ಮಳೆಯಾಗಿ ನದಿಗಳು ಉಕ್ಕಿಹರಿಯುತ್ತಿದ್ದು, ವರುಣನ ಆರ್ಭಟದಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ಅಪಾರ ನಷ್ಟ ಉಂಟಾಗಿದೆ. ಈ ನಡುವೆ ಮಹಾಮಳೆಗೆ ಕಬಿನಿ ಡ್ಯಾಂಗೆ ನೀರು ಹರಿದು ಬಂದಿದ್ದು ಡ್ಯಾಂ ಭರ್ತಿಯಾಗಲು ಅರ್ಧ ಅಡಿ ಮಾತ್ರ ಬಾಕಿ ಇದೆ.
ಕಬಿನಿ ಜಲಾಶಯದ ನೀರಿನ ಗರಿಷ್ಠ ಮಟ್ಟ 84 ಅಡಿಯಾಗಿದೆ. ಇಂದಿನ ನೀರಿನ ಮಟ್ಟ 83.50 ಅಡಿ ಇದ್ದು, ಒಳಹರಿವು 25,116 ಕ್ಯೂಸೆಕ್ ಇದೆ. ಹೊರಹರಿವು 7,350 ಕ್ಯೂಸೆಕ್ ಆಗಿದ್ದು ಜಲಾಶಯದಲ್ಲಿ ಇಂದು 19.19 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಸಾಮರ್ಥ್ಯ 19.52 ಟಿಎಂಸಿಯಾಗಿದೆ.
Key words: half-foot – Kabini reservoir -filling.