ಮೈಸೂರು, ಆಗಸ್ಟ್, 19, 2020(www.justkannada.in): ಆನೆ ದಂತ ಹಾಗೂ ಜಿಂಕೆ ಕೊಂಬುಗಳ ಮಾರಾಟಕ್ಕೆ ಯತ್ನಿಸಿದ ಐವರು ಆರೋಪಿಗಳನ್ನ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಡಿಸಿಎಫ್ ಪೂವಯ್ಯ ನೇತೃತ್ವದಲ್ಲಿ ಅರಣ್ಯ ಸಂಚಾರಿ ದಳವು ಕಾರ್ಯಾಚರಣೆ ನಡೆಸಿ ಮೈಸೂರಿನ ವಿನೋದ್, ರವಿಕುಮಾರ್, ಗೌತಮ್, ನಾಗರಾಜ್ ಮತ್ತು ಅಬ್ದುಲ್ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಆನೆ ದಂತ ಹಾಗು ಜಿಂಕೆ ಕೊಂಬುಗಳ ಮಾರಾಟಕ್ಕೆ ಯತ್ನಿಸಿದ್ದು ಈ ವೇಳೆ ಸಿಕ್ಕಿಬಿದ್ದಿದ್ದಾರೆ. ಕೃತ್ಯಕ್ಕೆ ಬಳಸಿದ್ದ 2 ಬೈಕ್ ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
key words: Elephant ivory -deer – sale-five -accused -arrest