ಬೆಂಗಳೂರು, ಆಗಸ್ಟ್, 21, 2020(www.justkannada.in): ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಿಇಟಿ ಫಲಿತಾಂಶವನ್ನ ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದ್ದು ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಆರ್ ವಿ ಕಾಲೇಜು ವಿದ್ಯಾರ್ಥಿನಿ ಎಂ.ರಕ್ಷಿತಾ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಉಳಿದಂತೆ ದ್ವಿತೀಯ ಸ್ಥಾನವನ್ನು ಶುಭನ್, ತೃತೀಯ ಸ್ಥಾನವನ್ನು ಶಶಾಂಕ್ ಬಾಲಾಜಿ ತಮ್ಮದಾಗಿಸಿಕೊಂಡಿದ್ದಾರೆ.
ಪಶು ವೈದ್ಯಕೀಯ ವಿಭಾಗ: ಸಾಯಿ ವಿವೇಕ್ ಮೊದಲ ರ್ಯಾಂಕ್, ಆರ್ಯನ್ ಮಹಾಲಿಂಗಪ್ಪ ದ್ವಿತೀಯ ರ್ಯಾಂಕ್, ಕೆ.ಸಂಜನಾ ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಕೃಷಿ ವಿಭಾಗದಲ್ಲಿ : ಮಂಗಳೂರು ಕಾಲೇಜಿನ ವರುಣ್ ಗೌಡ(ಮೊದಲ ರ್ಯಾಂಕ್), ಮೈಸೂರಿನ ಕೆ.ಸಂಜನಾ ದ್ವೀತಿಯ ರ್ಯಾಂಕ್, ಲೊಕೇಶ್ ಬಿ.ಜೋಗಿ ತೃತೀಯ ರ್ಯಾಂಕ್ ಪಡೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅಭಿನಂದನೆ ಸಲ್ಲಿಸಿದ್ದಾರೆ. ಅಕ್ಟೋಂಬರ್ ನಲ್ಲಿ ಕೌನ್ಸೆಲಿಂಗ್ ನಡೆಸುವುದಾಗಿ ತಿಳಿಸಿದ್ದಾರೆ.
Key words: CET-Result –Published- Toppers