ರಾಯಚೂರು,ಆ,21,2020(www.justkannada.in): ತಂತ್ರಜ್ಞಾನ ಬೆಳೆದಂತೆ ಇತ್ತೀಚೆಗೆ ಜಗತ್ತಿನಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು, ಈ ನಡುವೆ ಕರಕಲಗಡ್ಡಿಯಲ್ಲಿ ಸಿಲುಕು ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಡ್ರೋಣ್ ಮೂಲಕ ಔಷಧಿಯನ್ನ ರವಾನಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕರಕಲಗಡ್ಡಿಯಲ್ಲಿ ಸಿಲುಕಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಡ್ರೋಣ್ ಮೂಲಕ ಔಷಧಿ ರವಾನಿಸಲಾಗಿದೆ.
ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಇದರಿಂದಾಗಿ ಕರಕಲಗಡ್ಡಿಯಲ್ಲಿ ನಾಲ್ಕು ಜನರು ಸಿಲುಕಿದ್ದರು. ಈ ಪೈಕಿ ತಿಪ್ಪಣ್ಣ ಎಂಬುವವರಿಗೆ ಪಾರ್ಶ್ವವಾಯು ಕಾಯಿಲೆ ಇದ್ದು ಮೈ ಕೈ ನೋವು ಎಂದು ನರಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ರಾಯಚೂರು ಜಿಲ್ಲಾಡಳಿತ ಇದೀಗ ಹದಿನೈದು ದಿನಗಳಿಗೆ ಆಗವಷ್ಟು ಮಾತ್ರೆಗಳನ್ನ ಡ್ರೋಣ್ ಮೂಲಕ ಕಳುಹಿಸಿದೆ.
ರಾಯಚೂರು ಕೃಷಿ ವಿವಿಯಲ್ಲಿರುವ ಡ್ರೋಣ್ ಅನ್ನ ಬಳಕೆ ಮಾಡಿಕೊಂಡು ಕೃಷಿ ವಿಶ್ವವಿದ್ಯಾಲಯದ ತಂತ್ರಜ್ಞರ ಮಾರ್ಗದರ್ಶನದಲ್ಲಿ ಡ್ರೋಣ್ ಮೂಲಕ ಮಾತ್ರೆ ಕಳುಹಿಸಲಾಗಿದ್ದು ಈಗ ಆಹಾರ ಪದಾರ್ಥ ಕಳುಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೂಲಕ ನಡುಗಡ್ಡೆಯಲ್ಲಿದ್ದವರಿಗೆ ಪ್ರಥಮ ಬಾರಿಗೆ ಡ್ರೋಣ್ ಸಹಾಯ ಮಾಡಿದೆ.
key words: drone – Medicine –tablet-sick man – Raichur