ಬೆಂಗಳೂರು,ಆ,21,2020(www.justkannada.in):ವೈದ್ಯಕೀಯ ಬ್ರಾತೃತ್ವದ ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ಡಾ. ನಾಗೇಂದ್ರ,ನಂಜನಗೂಡು ಅವರ ಅಗಲಿದ ಆತ್ಮಕ್ಕಾಗಿ ಪ್ರಾರ್ಥಿಸಿ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )-ಕೆಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ ಎಲ್ಲಾ ಫಾನಾ ಸದಸ್ಯರು ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್‌ಲೈಟ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಸಮಾಜದ ಯೋಗಕ್ಷೇಮಕ್ಕಾಗಿ ಹಾಗೂ ಕೊರೋನಾ ಹೆಮ್ಮಾರಿಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ ಹೆಲ್ತ್‌ಕೇರ್ ಸಿಬ್ಬಂದಿ ಮತ್ತು ಕೋವಿಡ್ ಯೋಧರ ಸ್ಮರಣಾರ್ಥ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ )-ಕೆಎಸ್‌ಬಿ ನೀಡಿದ ಕರೆಗೆ ಬೆಂಬಲವಾಗಿ ಎಲ್ಲಾ ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ)ದ ಸದಸ್ಯರು, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಆಗಸ್ಟ್ 21 ಮತ್ತು 22 ರಂದು ನಾವೆಲ್ಲರೂ ಕಪ್ಪು ಬ್ಯಾಡ್ಜ್ / ರಿಬ್ಬನ್ ಧರಿಸಿ ಆಗಸ್ಟ್ 23 ರ ಭಾನುವಾರ ರಾತ್ರಿ 8.00 ಕ್ಕೆ, ಕ್ಯಾಂಡಲ್ ಲೈಟ್ ಪ್ರತಿಭಟನೆಯನ್ನ ಆಯೋಜಿಸಿದೆ.
ಆರೋಗ್ಯ ಸಿಬ್ಬಂದಿಯ ಸಮಸ್ಯೆಗಳು ಮತ್ತು ಒತ್ತಡಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮತ್ತು ಅಧಿಕಾರಶಾಹಿ ಆಡಳಿತವನ್ನು ಫಾನಾ (ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸಂಘ) ಖಂಡಿಸುವುದಾಗಿ ತಿಳಿಸಿದೆ.
key words: THO -suicide case- FANA -members -Candlelight -protest -aug 23rd.