ನವದೆಹಲಿ. ಆಗಸ್ಟ್ 23, 2020 (www.justkannada.in): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸುವುದಾಗಿ ಚೀನಾ ಮೂಲದ ಟಿಕ್‌ಟಾಕ್ ಆ್ಯಪ್ ತಿಳಿಸಿದೆ.
ತಮ್ಮ ಮೂಲ ಕಂಪನಿ ಬೈಟ್ ಡ್ಯಾನ್ಸ್ ನೊಂದಿಗಿನ ವ್ಯವಹಾರಗಳನ್ನು ನಿಷೇಧಿಸಿದ ಕಾರ್ಯಕಾರಿ ಆದೇಶ ಹೊರಡಿಸಿದ್ದಾಗಿ ಕಾನೂನು ಹೋರಾಟ ನಡೆಸುವುದಾಗಿ. ಮುಂದಿನ ವಾರದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೈಟ್ ಡ್ಯಾನ್ಸ್ ಅಧಿಕೃತ ಹೇಳಿದೆ.
ನಮ್ಮ ಕಂಪನಿ ಮತ್ತು ಬಳಕೆದಾರರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯಕಾರಿ ಆದೇಶವನ್ನು ಪ್ರಶ್ನಿಸದೆ ಬೇರೆ ಆಯ್ಕೆಯಿಲ್ಲ ಎಂದು ಟಿಕ್‌ಟಾಕ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.