ಬೆಂಗಳೂರು, ಆಗಸ್ಟ್, 24, 20209www.justkannada.in) ; ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ವರದಿ ನೆಗಿಟಿವ್ ಬಂದಿದ್ದು, ಈ ಕುರಿತು ಎಸ್ ಬಿ ಪಿ ಬಿ ಅವರ ಪುತ್ರ ಚರಣ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಎಸ್ ಪಿ ಬಿ ಗುಣಮುಖರಾಗಲೆಂದು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳ ಹರಕೆ, ಹಾರೈಕೆಯು ಫಲಿಸಿದಂತ್ತಾಗಿದ್ದು, ಕೊರೊನಾ ಗೆದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಸುಮಾರು 19 ದಿನಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರೂ, ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ದೇಶ, ವಿದೇಶದ ತಜ್ಞ ವೈದ್ಯರ ಸಹಕಾರದೊಂದಿಗೆ ಚಿಕಿತ್ಸೆಯನ್ನು ನೀಡಲಾಗುತಿತ್ತು. ಇದೀಗ ಕೊರೊನಾ ನೆಗಿಟಿವ್ ಬಂದಿರುವುದು ಅವರ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.
Key words : SPB-Corona-Report-Negative-S P B’s-son-Charan-tweeted