ಮೈಸೂರು,ಆ,24,2020(www.justkannada.in): ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಖಾಸಗಿ ಕಂಪನಿಯ ನೌಕರನನ್ನ ಖದೀಮರು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಎನ್ ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನೆನ್ನೆ ರಾತ್ರಿ ಈ ಘಟನೆ ನಡೆದಿದೆ. ಖಾಸಗಿ ಕಂಪನಿಯ ನೌಕರ, ಎನ್ ಆರ್.ಮೊಹಲ್ಲಾ ನಿವಾಸಿ ಪುನೀತ್ ದರೋಡೆಗೆ ಒಳಗಾದ ವ್ಯಕ್ತಿ. ಪುನೀತ್ ರಾತ್ರಿ 10 ಗಂಟೆ ವೇಳೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.
ಪುನೀತ್ ಬಳಿ ಇದ್ದ ಸರ ದೋಚಿದ ದರೋಡೆಕೋರರು, ಡ್ರ್ಯಾಗರ್ ತೋರಿಸಿ ಹಲ್ಲೆ ಮಾಡಿ ಬೆದರಿಸಿ ನಂತರ ಎಸ್ಕೇಪ್ ಆಗಿದ್ದಾರೆ. ಹಲ್ಲೆ ವೇಳೆ ಪುನೀತ್ ಗಂಭೀರ ಗಾಯಗೊಂಡಿದ್ದು, ಈ ಕುರಿತು ಎನ್,ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ಸ್ ಪೆಕ್ಟರ್ ಶೇಖರ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
Key words: mysore- robbery-private- company – Employee