ಬೆಂಗಳೂರು,ಆ,24,2020(www.justkannada.in): ಈ ಬಾರಿ ವಿಧಾನಸೌಧದಲ್ಲಿ ಮಳೆಗಾಲದ ಅಧಿವೇಶನ ಮಾಡಲಾಗುತ್ತದೆ. ಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸದನವನ್ನು ಪರಿಶೀಲಿಸಿದ್ದು ಅಗತ್ಯ ಕ್ರಮಗಳೊಂದಿಗೆ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಎರಡು ಸೀಟಿನ ಮಧ್ಯೆ ಗಾಜಿನ ಪರದೆ ಹಾಕಲಾಗುತ್ತದೆ. ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಸಾರ್ವಜನಿಕರಿಗೆ ಪಾಸ್ ನೀಡಲಾಗುವುದಿಲ್ಲ. ಅಧಿವೇಶನದ ವೇಳೆ ಪತ್ರಕರ್ತರಿಗೆ ಎರಡು ಗ್ಯಾಲರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸದನದಲ್ಲಿ ಪ್ರತಿ ಸದಸ್ಯರಿಗೆ ಫೆಸ್ ಶೀಲ್ಡ್ , ಮಾಸ್ಕ್ ವಿತರಿಸಲಾಗುತ್ತದೆ. ಸದನಕ್ಕೆ ಹಾಜರಾಗಲು ಉನ್ನತ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತದೆ. ಇಲಾಖೆಗೆ ಒಬ್ಬರು ಅಧಿಕಾರಿ ಮಾತ್ರ ಸದನಕ್ಕೆ ಬರಬೇಕು. ಈ ನಡುವೆ ಸಚಿವ ಜತೆ ಪಿಎಸ್ ಮಾತ್ರ ಇರಬೇಕಾಗುತ್ತದೆ. ಇನ್ನು ಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸದನವನ್ನು ಪರಿಶೀಲಿಸಿದ್ದು, ಸ್ಪೀಕರ್ ತೀರ್ಮಾನಕ್ಕೆ ನಮ್ಮ ಸಮ್ಮತಿ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
Key words: Monsoon -session – Minister –Madhuswamy- information -preparation – rules.