ಮೈಸೂರು,ಆಗಸ್ಟ್,26,2020(www.justkannada.in): ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಇದೇ ಸೆಪ್ಟೆಂಬರ್ 14ರಿಂದ ರಾಜ್ಯಾದ್ಯಂತ ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮೂರು ಹಂತಗಳಲ್ಲಿ ಸೈಕಲ್ ಯಾತ್ರೆ ಆಯೋಜಿಸಿದ್ದು, ಸೆಪ್ಟೆಂಬರ್ 14 ರಿಂದ #ಚಲಿಸು ಕರ್ನಾಟಕ’ದ ಮೊದಲ ಹಂತದ ಸೈಕಲ್ ಯಾತ್ರೆ ಪ್ರಾರಂಭವಾಗಲಿದೆ. ಮೊದಲ ಹಂತದ ಸೈಕಲ್ ಯಾತ್ರೆಯು ಸೆಪ್ಟೆಂಬರ್ 14, ರಂದು ಕೋಲಾರದಿಂದ ಆರಂಭವಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳನ್ನು ಹಾದು ತುಮಕೂರು ಜಿಲ್ಲೆಯ ಶಿರಾದಲ್ಲಿ ಸೆಪ್ಟೆಂಬರ್ 27, 2020ರಂದು ಸಮಾರೋಪವಾಗುವುದು.
ಎರಡನೇ ಹಂತದ ಜಾಥಾ ಅಕ್ಟೋಬರ್ 5, 2020ರಂದು ಬಳ್ಳಾರಿಯಿಂದ ಆರಂಭವಾಗಿ ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್, ಗುಲ್ಬರ್ಗ, ವಿಜಯಪುರ, ಬಾಗಲಕೋಟೆ (ಕೂಡಲಸಂಗಮ) ಜಿಲ್ಲೆಗಳಲ್ಲಿ ಸಾಗುತ್ತದೆ.
ಮೂರನೇ ಹಂತದ ಜಾಥಾ ನವೆಂಬರ್ 23, 2020ರಂದು ಬೆಳಗಾವಿಯಿಂದ ಆರಂಭವಾಗಿ ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಸೋಮಸುಂದರ್ ಕೆ ಎಸ್, ಸೈಕಲ್ ಇಲ್ಲದವರಿಗೆ ಸೈಕಲ್ ವ್ಯವಸ್ಥೆ ಮಾಡಲಾಗುವುದು. ದ್ವಿಚಕ್ರ ವಾಹನ ಅಥವಾ ಕಾರಿನಲ್ಲಿ ಬರುವವರೂ ಜೊತೆಯಾಗಬಹುದು ಸೈಕಲ್ ತುಳಿಯಲು ಆಗದಿದ್ದರೂ ಯಾತ್ರೆಯಲ್ಲಿ ಪಾಲ್ಗೊಳ್ಳಬಯಸುವ ಆಸಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಊಟ ಮತ್ತು ವಸತಿಯ ವ್ಯವಸ್ಥೆ ಇರುತ್ತದೆ. ಪ್ರತಿದಿನ ಆರೋಗ್ಯ ತಪಾಸಣೆ ಮಾಡಲಾಗುವುದು. ಸೈಕಲ್ ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಇಲ್ಲಿ ನೋಂದಾಯಿಸಿಕೊಳ್ಳಬಹುದು. http://www.krsparty.org/registration/cycle.php ಈ ಲಿಂಕ್ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ “#ಚಲಿಸುಕರ್ನಾಟಕ #KRSಸೈಕಲ್ ಯಾತ್ರೆ ಉಸ್ತುವಾರಿ ಸಮಿತಿ”ಯ ಆಧ್ಯಕ್ಷ ಲಿಂಗೇಗೌಡ ಎಸ್ ಎಚ್, (94813-01793), ಸಂಯೋಜಕ ದೀಪಕ್ ನಟರಾಜ್, (79756-25575), ಸದಸ್ಯರಾದ ಮಲ್ಲಿಕಾರ್ಜುನ್ ಬಟ್ಟರಹಳ್ಳಿ(86608-04172), ರಘು (99864-99551), ರಘುಪತಿಭಟ್(96110-96523), ಸೋಮುಸುಂದರ್ ಕೆ.ಎಸ್ (93421-85672) ಅವರನ್ನು ಸಂಪರ್ಕಿಸಬಹುದಾಗಿದೆ.
Key words: statewide -cycle ride – Karnataka Rashtra Samithi- September 14th.