ಮೈಸೂರು, ಆಗಸ್ಟ್, 26, 2020(www.justkannada.in) ; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಬಿವೈ ವಿಜಯೇಂದ್ರ ಟ್ರಾನ್ಸ್ ಫರ್ ದಂಧೆಯಲ್ಲಿ ಕೋಟಿಗಟ್ಟಲೇ ವಸೂಲಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಸಿಎಂ ಪುತ್ರ ವಿಜಯೇಂದ್ರ ಅವರು ಎಲ್ಲಾ ಇಲಾಖೆಗಳಲ್ಲೂ ಉಸ್ತುವಾರಿಗಳನ್ನು ಮಾಡಿಕೊಂಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿ 31 ಜನರ ಗುಂಪು ಕಟ್ಟಿಕೊಂಡಿದ್ದಾರೆ. ಈ 31 ಜನರ ಚಲನವಲನಗಳನ್ನು ಗಮನಿಸಿದ್ದು, ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದೇವೆ, ಸೆಪ್ಟೆಂಬರ್ 2 ಅಥವಾ 3ನೇವಾರದಂದು ದೆಹಲಿಯಲ್ಲಿ ವಿಡಿಯೋ, ಆಡಿಯೋ ಜೊತೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ವಿಜಯೇಂದ್ರ ಅವರು ಟ್ರಾನ್ಸ್ ಫರ್ ದಂಧೆಯಲ್ಲಿ ಕೋಟಿಗಟ್ಟಲೇ ಲೂಟಿ ಬಗ್ಗೆ ದಾಖಲೆಗಳಿದ್ದು, ಈ ದಾಖಲೆಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಬಿಡುಗಡೆ ಮಾಡಲಾಗುವುದು . ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಅಕ್ರಮದ ಬಗ್ಗೆ ಬಿಜೆಪಿ ಶಾಸಕರಿಂದಲೇ ಪತ್ರ…
ಇನ್ನು ಈ ಅಕ್ರಮದ ಬಗ್ಗೆ ಬಿಜೆಪಿ ಶಾಸಕರೇ ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಈ ಪತ್ರ ಲಭ್ಯವಿದೆ ಎಂದು ಪತ್ರ ಬಿಡುಗಡೆ ಮಾಡಿ ಆರೋಪಿಸಿರುವ ಎಂ. ಲಕ್ಷ್ಮಣ್, ಈ ಪತ್ರದ ಬಗ್ಗೆ ನೀವೆ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.
Key words ;Transfer-allegation-against-CM’s son-B.Y-Vijayendra-kpcc -Spokesperson-M. Lakshman