ಬೆಂಗಳೂರು, ಆಗಸ್ಟ್ 26, 2020 (www.justkannada.in): ಕೊರೊನಾ ಭೀತಿಯಿಂದ ಥಿಯೇಟರ್ ಗಳು ತೆರೆಯುವುದು ಅನುಮಾನವಾಗಿರುವ ದಿನಗಳಲ್ಲಿ ತಮಿಳು ನಟ ಸೂರ್ಯ ಅವರಿನಿಗೆ ಅಮೆಜಾನ್ 40 ಕೋಟಿ ರೂ. ಆಫರ್ ನೀಡಿದೆ.
ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಕೊನೆಗೂ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಚಿತ್ರಕ್ಕೆ ಅಮೆಜಾನ್ ಪ್ರೈ ದೊಡ್ಡ ಮೊತ್ತದ ಹಣವನ್ನು ನೀಡಿದೆ.
ಸದ್ಯಕ್ಕೆ ಥಿಯೇಟರ್ ಗಳು ಆರಂಭವಾಗುವ ಸಾಧ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸೂರರೈ ಪೊಟ್ರು ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಢಲು ಚಿತ್ರತಂಡ ನಿರ್ಧರಿಸಿದೆ. ಅಕ್ಟೋಬರ್ 30ನೇ ತಾರೀಖಿನಂದು ಆನ್ ಲೈನ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.