ಬೆಂಗಳೂರು,ಆಗಸ್ಟ್,28,2020(www.justkannada.in): ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಂಬುದಾಗಿ ಎರಡು ಪ್ರತ್ಯೇಕವಾಗಿವೆ. ಈ ಪಿಯು ಮತ್ತು ಎಸ್ ಎಸ್ ಎಲ್ ಸಿ ಮಂಡಳಿಗಳನ್ನು ಜೊತೆಗೂಡಿಸಿ ಒಂದೇ ಮಂಡಳಿಯನ್ನಾಗಿ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪಿಯು ಮತ್ತು ಎಸ್ ಎಸ್ ಎಲ್ ಸಿ ಮಂಡಳಿಗಳನ್ನ ಜೊತೆಗೂಡಿಸಿ ಒಂದೇ ಮಂಡಳಿ ಮಾಡಲು ನಿರ್ಧರಿಸಲಾಗಿದೆ. ಈ ಮರ್ಜ್ ಆದಂತ ಎರಡು ಮಂಡಳಿಗಳನ್ನು ಪ್ರಾಥಮಿಕ ಶಿಕ್ಷಣ ಪರಿಷತ್ ಎಂದು ನಾಮಕರಣ ಮಾಡಲಾಗುತ್ತದೆ ಎಂಬುದಾಗಿ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇದೆ. ಪಿಯು ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳೋದಕ್ಕಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಇದೆ. ಇಂತಹ ಎರಡು ಮಂಡಳಿಗಳನ್ನು ಒಂದೇ ಮಾಡುವಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
PU ಮತ್ತು SSLC ಮಂಡಳಿಗಳನ್ನು ಒಂದೇ ಮಾಡಿ ವಿಲೀನಗೊಳಿಸುವಂತೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಎರಡು ಮಂಡಳಿಗಳನ್ನು ವಿಲೀನಗೊಳಿಸಿ ಪ್ರಾಥಮಿಕ ಶಿಕ್ಷಣ ಪರಿಷತ್ ಎಂಬುದಾಗಿ ಮರು ನಾಮಕರ ಮಾಡಲಿರುವುದಾಗಿ ತಿಳಿಸಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಪಿಯು, ಎಸ್‌ಎಸ್‌ಎಲ್ಸಿ ಮಂಡಳಿಗಳು ವೀಲಿನಗೊಂಡು, ಪ್ರಾಥಮಿಕ ಶಿಕ್ಷಣ ಪರಿಷತ್ ಅಸ್ಥಿತ್ವಕ್ಕೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
Key words: Soon –PUC-SSLC- board –merge-Education Minister- Suresh Kumar