ಬೆಂಗಳೂರು, ಆಗಸ್ಟ್, 31, 2020(www.justkannada.in) ; ಸಿಸಿಬಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದು, ಸಾಮಾಜಿಕ ಕಳಕಳಿಯಿಂದ ನನ್ನ ಬಳಿಯಿದ್ದ 10, 15 ಮಂದಿ ನಟ, ನಟಿಯರ ದಾಖಲೆಗಳನ್ನು ಒದಗಿಸಿದ್ದೇನೆ. ಮುಂದಿನ ಪೀಳಿಗೆಯವರಿಗೆ ಇದು ಎಚ್ಚರಿಕೆಯಾಗಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯ ಸಂಬಂಧಪಟ್ಟಂತೆ ಸಿಸಿಬಿಗೆ ಮಾಹಿತಿ ನೀಡಿ ನಂತರ ಮಾತನಾಡಿದರು.
ದಾಖಲೆ ಸಮೇತ, ಯಾರು, ಯಾರು ಭಾಗಿಯಾಗಿದ್ದಾರೆ ಅವರೆಲ್ಲರ ಹೆಸರು ಕೊಟ್ಟಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಸಮಾಜದಿಂದ ಡ್ರಗ್ಸ್ ಮಾಫಿಯಾವನ್ನು ಮುಗಿಸಲು ಸಾಧ್ಯವಿಲ್ಲ. ಹಾಗಾಗಿಯೂ, ಸಾಮಾಜಿಕ ಕಳಕಳಿಯಿಂದ ವಿಚಾರಣೆಗೆ ಹಾಜರಾಗಿ ಮಾಹಿತಿ ಒದಗಿಸಿದ್ದೇನೆ. ಕಾಲೇಜು ಮಕ್ಕಳು, ಯುವ ಕಲಾವಿದರಿಗೆ ಇದು ಎಚ್ಚರಿಕೆಯಾಗಬೇಕು ಎಂದರು.
ಹೆಸರುಗಳ ಬಹಿರಂಗಪಡಿಸಿದರೆ ತನಿಖೆಗೆ ತೊಂದರೆ
ನನಗೆ ಯಾವುದೇ ರಾಜಕಾರಣಿ ಮಕ್ಕಳು ಅಥವಾ ಯುವ ನಟರಿಂದ ಭಯ ಇಲ್ಲ. ದಾಖಲೆಯನ್ನು ಒದಗಿಸಲು ಪ್ರೋತ್ಸಾಹ ನೀಡಿ ಎಂದು ಕೇಳಿದ ಅಷ್ಟೇ. ಇದರಿಂದ ಸಮಾಜದಲ್ಲಿ ಭಯ ಹುಟ್ಟಬೇಕು ಯಾರು ತಪ್ಪು ದಾರಿಗೆ ಹೋಗಬಾರದು ಎಂಬ ಸಂದೇಶ ರವಾನೆಯಾಗಬೇಕು. ಹೆಸರುಗಳ ಬಹಿರಂಗಪಡಿಸಿದರೆ ತನಿಖೆಗೆ ತೊಂದರೆಯಾಗುವುದು. ಹಾಗಾಗಿ, ಹೆಸರು ಹೇಳುವುದಿಲ್ಲ. ಹೆಸರು ಹೇಳಿ ತೇಜೋವಧೆ ಮಾಡುವ ಉದ್ದೇಶ ನನಗಿಲ್ಲ.
ರವಿ ಬೆಳಗೆರೆ ವಿರುದ್ಧ ಕಿಡಿ
ಚಂದ್ರಶೇಖರ ಪಾಟೀಲ್ ಅವರ ಬಳಿ ಲಂಕೇಶ್ ಅವರನ್ನು ಕುರಿತು ಪತ್ರಕರ್ತ ಕೇಳಿದ ಪ್ರಶ್ನೆಗೆ ಅವರು ಲಂಕೇಶ್ ಅಲ್ಲ ಆತ ಕೇಶ ಎಂದು ಹೇಳಿದರು. ಆದರೆ, ಸುಫಾರಿ ಕೊಟ್ಟ ರವಿ ಬೆಳಗೆರೆ ಅವರು ಸ್ವಂತ ವಾಕ್ಯವನ್ನು ಸೃಷ್ಟಿ ಮಾಡಲಾಗದೇ ಅದೇ ವಾಕ್ಯವನ್ನು ಇಲ್ಲಿ ಬಳಸಿದ್ದಾರೆ ಎಂದು ಕಿಡಿಕಾರಿದರು.
ಕುಟುಂಬದ ಎಲ್ಲರೂ ಕುಳಿತು ಟಿವಿ ನೋಡುತ್ತಾರೆ. ಹೀಗಾಗಿ, ನೀವು ಕನ್ನಡ, ಸಾಹಿತ್ಯವು ಗೊತ್ತಿಲ್ಲದವರ ಬಳಿ ಹೇಳಿಕೆ ಪಡೆಯಬೇಡಿ. ಅವರ ಹೇಳಿಕೆಯ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳಲ್ಲ. ಪತ್ರಕರ್ತನಿಗೆ ಸ್ವಂತ ವಾಕ್ಯವನ್ನು ಹೇಳುವುದಕ್ಕೆ ಬರಲ್ಲ ದೊಡ್ಡ ಸಾಹಿತಿಯ ಮಾತನ್ನು ಕಾಫಿ ಮಡುತ್ತಾನೆ ಎಂದು ನಗು ಬರುತ್ತದೆ. ಅಂಥಹವರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡುತ್ತಿರ ಎಂದು ಪ್ರಶ್ನಿಸಿದ್ದಾರೆ.
ತನಿಖೆಗಳಿಂದ ಸರಕಾರ ಬೀಳಿಸಿದವರು ನನ್ನ ತಂದೆ
ನಮ್ಮ ತಂದೆ ಲಂಕೇಶ್ ಅವರು ತನಿಖೆಗಳ ಮೂಲಕ ಸರಕಾರವನ್ನು ಬೀಳಿಸಿದ್ದಾರೆ. ಸಮಾಜಕ್ಕೆ ಸಂದೇಶ ಕೊಟ್ಟವರನ್ನು ಕರೆಯಿಸಿ. ಅಂಗಾಂಗಗಳ ಬಗ್ಗೆ ಮಾತನಾಡುವವರನ್ನು ಅಲ್ಲ ಎಂದು ಕಿಡಿಕಾರಿದರು.
ಸತ್ತವರ ಬಗ್ಗೆ ಮಾತನಾಡುವುದು ಬೇಡ
ಚಿರು ಬಗ್ಗೆ ಮಾತನಾಡುವುದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆಯಾದರೆ, ಉಳಿದವರಿಗೆ ಅರಿವಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳ ಬಳಿ ಪಡೆದುಕೊಳ್ಳಿ ಎಂದು ಹೇಳಿದರು.
ಐದುವರೆ ಗಂಟೆಗಳ ಕಾಲ ಮಾಹಿತಿ
ಐದುವರೆ ಗಂಟೆಗಳ ಕಾಲ ಮಾಹಿತಿ ನೀಡಿದ್ದು, ನನ್ನ ಮಾಹಿತಿಯಿಂದ ಸಿಸಿಬಿ ಅಧಿಕಾರಿಗಳಿಗೆ ಖುಷಿಯಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ನನ್ನ ಬೆಂಬಲಿಸಿದವರಿಗೆ ಧನ್ಯವಾದಗಳು. ಸಿಸಿಬಿ ಅವರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಎಂಬ ನಂಬಿಕೆಯಿದೆ ಎಂದು ತಿಳಿಸಿದರು.
key words ; Sandalwood-Drugs-Mafia-What-information-Indrajit-CCB-police?