ಮೈಸೂರು, ಸೆಪ್ಟೆಂಬರ್ 02, 2020 (www.justkannada.in); ಇಂದ್ರಜಿತ್ ಲಂಕೇಶ್ ಪರ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ಗೇಲಿ ಮಾಡುವುದನ್ನು ಬಿಡಬೇಕು. ಡ್ರಗ್ಸ್ ದೇಶದ ಭವಿಷ್ಯವನ್ನು ಮಂಕು ಮಾಡುತ್ತಿದೆ. ಇದರಲ್ಲಿ ಯಾರಿದ್ದಾರೆ ಮಡಿವಂತಿಕೆ ಬಿಟ್ಟು ಬಹಿರಂಗಪಡಿಸಬೇಕು. ಸಿನಿಮಾ ರಾಜಕಾರಣಿ ಉದ್ಯಮಿಗು ಅಧಿಕಾರಿಗಳ ಶ್ರೀಮಂತಿಕೆಯೇ ಇದಕ್ಕೆಲ್ಲಾ ಕಾರಣ. ಪ್ರಕರಣವನ್ನು ಬಯಲು ಮಾಡಿದ ಇಂದ್ರಜಿತ್ ಲಂಕೇಶ್ ಅವರನ್ನು ಗೇಲಿ ಮಾಡುವುದು ಬೇಡ ಎಂದು ಹೇಳಿದರು.
ಡ್ರಗ್ಸ್ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಚಿತ್ರರಂಗದಿಂದ ಯುವಕರಿಗೆ ತಪ್ಪು ಮಾಹಿತಿ ಹೋಗುತ್ತಿದೆ. ವಿದೇಶಿ ಪ್ರಜೆಗಳು ಪರವಾನಿಗೆ ಮುಗಿದರು ಇಲ್ಲಿದ್ದಾರೆ. ಕೀನ್ಯಾ ಉಗಾಂಡ್‌ದಿಂದ ಬಂದವರು ಇಲ್ಲಿದ್ದಾರೆ. ಇದು ಪೊಲೀಸರಿಗೂ ಗೊತ್ತಿದೆ. ಕೋವಿಡ್ 19 ಪ್ರವಾಹದ ಮಾದರಿಯಲ್ಲಿ ಡ್ರಗ್ಸ್ ದಂಧೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ದಂಧೆ ಕುರಿತು ಮಾತನಾಡಿಲು ಬೇರೆಯವರಿಗೆ ಹೇಳಲು ಧೈರ್ಯ ಇಲ್ಲ. ಪೊಲೀಸರ ಸಹಕಾರವೂ ಇಲ್ಲ ರಾಜಕಾರಣಿಗಳ ಸಹಕಾರವೂ ಇಲ್ಲ. ರಾಜಾಹುಲಿ ಯಡಿಯೂರಪ್ಪ ಅವರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.