ಕೊರೋನಾ ವೈರಸ್ ಗೆ ಸೋಪ್, ನೀರು ಮತ್ತು ಸಾಮಾನ್ಯ ಜ್ಞಾನವೇ ಮದ್ದು ; ಪ್ರೊ.ಪಿ.ಬಲರಾಮ್

ಮೈಸೂರು,ಆಗಸ್ಟ್,3,2020 (www.justkannada.in) ; ಸೋಪ್, ನೀರು ಮತ್ತು ಸಾಮಾನ್ಯ ಜ್ಞಾನವು ಕೊರೋನಾ ವೈರಸ್‌ಗೆ ಉತ್ತಮ ಸೋಂಕು ನಿವಾರಕಗಳಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಪಿ.ಬಲರಾಮ್ ಪ್ರಸ್ತುತ ಪಡಿಸಿದರು.

jk-logo-justkannada-logo

ಮೈಸೂರು ವಿವಿ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗ ಮತ್ತು ವಿಜ್ಞಾನ ಭವನದ ಸಹಯೋಗದೊಂದಿಗೆ ಆಯೋಜಿಸಿದ್ದ ‘’ಕೊರೊನಾ ವೈರಸ್ ನ ಇತಿಹಾಸ ಮತ್ತು ರಸಾಯನಿಕ ಜೀವಶಾಸ್ತ್ರ’’ ವಿಷಯ ಕುರಿತ ವೆಬಿನಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Soap-water-common-sense-medicine-coronavirus,Prof.P.Balaram

ವೆಬಿನಾರ್ ನಲ್ಲಿ ಕೊರೊನಾ ವೈರಸ್ ಕುರಿತು ಅಧ್ಯಯನ ಮಾಡುವ ಸಂಬಂಧ ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ಸಮಗ್ರ ಮಾಹಿತಿ ನೀಡಿದರು. ಕರೋನಾ ವೈರಸ್ ನ ಇತಿಹಾಸ ಮತ್ತು ವೈಜ್ಞಾನಿಕ ಮನೋಭಾವದ ಕಡೆಗೆ ಕೇಂದ್ರೀಕರಿಸಿದರು. ವೈರಸ್ ನ ಗಾತ್ರ ಮತ್ತು ಅದನ್ನು ನೋಡಲು ಬಳಸುವ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯನ್ನು ಬಗ್ಗೆ ತಿಳಿಸಿದರು.

ವೈರಸ್ ಪ್ರೋಟೀನ್‌ನ ರಚನೆಯು ಸ್ಪೈಕ್ ಪ್ರೋಟೀನ್, ಮೆಂಬ್ರೇನ್ ಎಂ ಪ್ರೋಟೀನ್, ಹೊದಿಕೆ ಇ ಪ್ರೋಟೀನ್ ಮತ್ತು ನ್ಯೂಕ್ಲಿಯೊಕ್ಯಾಪ್ಸಿಡ್ ಪ್ರೋಟೀನ್‌ಗಳನ್ನು ಒಳಗೊಂಡಿದೆ. ಕೋಶಕ್ಕೆ ಆಕ್ರಮಣ ಮಾಡುವ ವೈರಸ್ ಸಂಬಂಧಿಸಿದಂತೆಯು ಮಾಹಿತಿ ನೀಡಿದರು.

ಕರೋನಾ ವೈರಸ್‌ನ ಪರಮಾಣು ರಚನೆಯನ್ನು ಎಕ್ಸರೆ ಸ್ಫಟಿಕಶಾಸ್ತ್ರ ಮತ್ತು ಕ್ರಯೋ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಬಳಸಿ ಸ್ಪಷ್ಟಪಡಿಸಲಾಗಿದೆ. ಕೊರೊನಾ ವೈರಸ್ ನ ರಚನೆ, ಅದರ ಕಾರ್ಯವೈಖರಿ, ಮನುಷ್ಯನ ದೇಹದೊಳಗೆ ಪ್ರವೇಶಿಸಿದ ಬಳಿಕ ಎದುರಾಗುವ ಪರಿಣಾಮದ ಕುರಿತು ಹೇಳಿದರು.

ಪ್ರಸ್ತುತ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುವುದಕ್ಕೆ ಬಳಸಲಾಗುತ್ತಿರುವ ಮಾರ್ಗಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡುವುದು ಉತ್ತಮ ಕಾರ್ಯ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದರು.

ಕೊರೊನಾ ವೈರಸ್ ಗಳನ್ನು 1960ರ ದಶಕದಲ್ಲಿ ಕಂಡು ಹಿಡಿಯಲಾಯಿತು. 2019 ಡಿಸೆಂಬರ್ 31ರಂದು ಕೊರೊನಾ ವೈರಸ್ ನೊವೆಲ್ ಸ್ಟೈನ್ ಅನ್ನು 2019-ncov  ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಅಧಿಕೃತವಾಗಿ ಗುರುತಿಸಲಾಯಿತು. 2019-20ರಲ್ಲಿ ವೂಹಾನ್ ಕೊರೊನಾ ವೈರಸ್ ಇದು SARS-COV ಗೆ 70% ಹೋಲಿಕೆಯಾಗುತ್ತದೆ ಎಂದು ತಿಳಿಸಲಾಗಿದೆ ಎಂದು ವಿವರಿಸಿದರು.

ವೆಬಿನಾರ್ ನ ಕೊನೆಯ ಹಂತದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಅನೇಕರು ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ವೆಬಿನಾರ್ ನಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ ಅಧ್ಯಕ್ಷ  ಪ್ರೊ.ಕೆ.ಎಸ್.ರಂಗಪ್ಪ, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ.ಎಸ್.ಎಸ್.ನಿರಂಜನ್, ಮೈಸೂರು ವಿವಿ ವಿಶೇಷ ಪ್ರಾಧ್ಯಾಪಕ ಪ್ರೊ. ಮೇವಾ ಸಿಂಗ್ ಇತರರು ಗವಹಿಸಿದ್ದರು.

key words ; Soap-water-common-sense-medicine-coronavirus,Prof.P.Balaram