ಬೆಂಗಳೂರು,ಜೂ.8,2019(www.justkannada.in): ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು ಈ ನಡುವೆ ತಮಗೆ ಸ್ಥಾನ ಸಿಗದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಸಮ್ಮಿಶ್ರ ಸರ್ಕಾರದ ವಿರುದ್ದ ಶಾಸಕ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.
ಅವರ ಮಂತ್ರಿ ಸ್ಥಾನ ಕೊಟ್ಟರೂ ಬೇಡ ಇದಕ್ಕಿಂತ ಅಪಮಾನ ಬೇರೊಂದಿಲ್ಲ ಮಂತ್ರಿಯಾಗಿ ಜನರ ಸೇವೆ ಮಾಡಬೇಕು ಎಂಬುದು ಇಲ್ಲ ಎಂದು ಶಾಸಕ ಬಿ.ಸಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಶಾಸಕ ಬಿ.ಸಿ ಪಾಟೀಲ್ , ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿರಿಯರು ಎಂಬ ಹೆಸರಿನಲ್ಲಿ 15 ಮಂದಿ ಸಚಿವರಾಗಲು ಸಿದ್ಧರಾಗಿ ನಿಂತುಬಿಡುತ್ತಾರೆ. ಸರ್ಕಾರ ಬತು ಅಂದ್ರೆ ಸಾಕು ಕೆಲವರು ಫಿಕ್ಸ್ ಆಗಿರ್ತಾರೆ. ಸರ್ಕಾರ ಬಂತು ಅಂದರೆ ಸಾಕು ಅವರೇ ಮಂತ್ರಿ ಆಗುತ್ತಾರೆ. ಪ್ರತಿ ಬಾರಿಯೂ ಅವರಿಗೆ ಅವಕಾಶಗಳು ಸಿಗುತ್ತವೆ. ಅವರ ನಂತರ ಉಳಿದಿದ್ದು ಸ್ಪೇರ್ ಸ್ಪಾಟ್ರ್ಸ್ಗಳಂತೆ ಅವರಿವರಿಗೆ ಕೊಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಬಾರಿಯೂ ತೋಳ ಬಂತು ತೋಳ ಕಥೆ ಹೇಳುತ್ತಿದ್ದಾರೆ. ಅದನ್ನು ಕೇಳಿ ನನಗೂ ಸಾಕಾಗಿದೆ. ಅವಮಾನದಿಂದ ಸಾಕಷ್ಟು ನೊಂದಿದ್ದೇನೆ. ಈಗ ಸಂಪುಟ ಸೇರಲೇಬಾರದು ಎಂಬ ತೀರ್ಮಾನ ಮಾಡಿದ್ದೇನೆ. ಇನ್ನು ಮುಂದೆ ಯಾರ ಮನೆಯ ಬಾಗಿಲಿಗೆ ನಾನು ಹೋಗುವುದಿಲ್ಲ. ಯಾವ ಬೇಡಿಕೆಗಳನ್ನು ಕೇಳುವುದಿಲ್ಲ ಎಂದು ಬಿಸಿ ಪಾಟೀಲ್ ಆಕ್ರೋಶ ಹೊರ ಹಾಕಿದರು.
Key words: MLA BC Patil outrage against the coalition government