ಮರು ಮೌಲ್ಯಮಾಪನ: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಮೈಸೂರು ವಿದ್ಯಾರ್ಥಿನಿ….

ಮೈಸೂರು,ಸೆಪ್ಟಂಬರ್,5,2020(www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಮರುಮೌಲ್ಯಮಾಪನದ ಬಳಿಕ ಮೈಸೂರಿನ ವಿದ್ಯಾರ್ಥಿನಿಯೊಬ್ಬರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.mysore-sslc-student-marimallappa-high-school-second-topper-state

ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ವೈ ಅಗ್ನಿಹೋತ್ರಿ ಎಂಬ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ 2020 ಪರೀಕ್ಷೆ ಮರುಮೌಲ್ಯಮಾಪನದಲ್ಲಿ 625 ಅಂಕಗಳಿಗೆ 624 ಅಂಕಗಳನ್ನು ಪಡೆದುಕೊಂಡಿದ್ದು ಈ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಸ್ಪೂರ್ತಿ ವೈ. ಅಗ್ನಿಹೋತ್ರಿ ವಿಜಯನಗರ 1ನೇ ಹಂತದ ನಿವಾಸಿ ಯೋಗೀಶ್ ಎನ್.ಅಗ್ನಿಹೋತ್ರಿ ದಂಪತಿಯ ಪುತ್ರಿ. ಸ್ಪೂರ್ತಿ ಮೊದಲಿಗೆ 625ಕ್ಕೆ 618 ಅಂಕಗಳನ್ನು ಗಳಿಸಿದ್ದರು. ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕಗಳನ್ನು ಗಳಿಸಿದ್ದ ಸ್ಪೂರ್ತಿ ಇಂಗ್ಲಿಷ್ ನಲ್ಲಿ ಮಾತ್ರ 93 ಅಂಕಗಳನ್ನು ಗಳಿಸಿದ್ದರು. ಇಂಗ್ಲಿಷ್ ನಲ್ಲಿ ನಿರೀಕ್ಷೆಯಷ್ಟು ಅಂಕ ಬರದ ಕಾರಣ ಮರು ಮೌಲ್ಯಮಾಪನಕ್ಕೆ ಆ.14 ರಂದು ಅರ್ಜಿ ಸಲ್ಲಿಸಿದ್ದರು. ಇದೀಗ ಮರು ಮೌಲ್ಯಮಾಪನ ಫಲಿತಾಂಶದಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವೀತಿಯ ಸ್ಥಾನಗಳಿಸಿದ್ದಾರೆ.

mysore-sslc-student-marimallappa-high-school-second-topper-state

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಸ್ಪೂರ್ತಿ ವೈ ಅಗ್ನಿಹೋತ್ರಿಗೆ ಮರಿಮಲ್ಲಪ್ಪ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗಯೇ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದಾರೆ.

Key words: mysore-SSLC- student- Marimallappa High School- second topper- state