ಬೆಂಗಳೂರು,ಸೆಪ್ಟಂಬರ್,6,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ಮತ್ತೊಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ನಟಿ ರಾಗಿಣಿ ಆಪ್ತ ರವಿ ಶಂಕರ್ ನ ಅತ್ಯಾಪ್ತ ಪ್ರಶಾಂತ್ ರಾಂಕ ಎಂಬುವವರನ್ನ ಸಿಸಿಬಿ ವಶಕ್ಕೆ ಪಡೆದಿದೆ. ಡ್ರಗ್ಸ್ ಸೇವಿಸುತ್ತಿದ್ದವರಿಗೆ ಪೂರೈಕೆ ಮತ್ತು ನಟಿ ರಾಗಿಣಿ ಮತ್ತು ರವಿಶಂಕರ್ ಭಾಗವಹಿಸುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಪ್ರಶಾಂತ್ ರಾಂಕ ಎಂಬುವವರನ್ನ ವಶಕ್ಕೆ ಪಡೆದಿದ್ದಾರೆ.
ಪ್ರಶಾಂತ್ ರಂಕಾ ರಾಜಸ್ತಾನದ ಮೂಲದವರಾಗಿದ್ದು, ಇಂದಿರಾ ನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ಪ್ರಶಾಂತ್ ರಾಂಕ ಫೈನಾಂಶಿಯಲ್ ಕಂಪನಿಯಲ್ಲಿ ಕಾರ್ ಸೀಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
Keywords: Sandalwood – drug dealing- Another -CCB -detained.