ಡ್ರಗ್ಸ್ ಮಾಫಿಯಾ ವಿಚಾರ: ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಸಮರ್ಥಿಸಿಕೊಂಡ ಹೆಚ್.ಕೆ ಪಾಟೀಲ್…

ಬೆಂಗಳೂರು.ಸೆಪ್ಟಂಬರ್,12,2020(www.justkannada.in): ಡ್ರಗ್ ಮಾಫಿಯಾದಲ್ಲಿ ಜಮೀರ್ ಅಹ್ಮದ್ ಖಾನ್ ವಿರುದ್ಧ ಆರೋಪ  ಕೇಳಿ ಬಂದಿದ್ದು ಈ ಸಂಬಂಧ ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.jk-logo-justkannada-logo

ಈ ಕುರಿತು ಮಾತನಾಡಿರುವ ಹೆಚ್.ಕೆ ಪಾಟೀಲ್, ಜಮೀರ್ ಅಹ್ಮದ್ ಖಾನ್ ತನ್ನ ವಿರುದ್ಧದ ಆರೋಪ ಸಾಬೀತಾದರೆ ಪೂರ್ತಿ ಆಸ್ತಿಯನ್ನೇ ಸರ್ಕಾರಕ್ಕೆ ಕೊಡೋದಾಗಿ ಹೇಳಿದ್ದಾರೆ. ಡ್ರಗ್ ಮಾಫಿಯಾ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಹೆಚ್.ಕೆ. ಪಾಟೀಲ್, ಪಕ್ಷದ ಅಧಿನಾಯಕಿ, ಪಕ್ಷದ ಅಧ್ಯಕ್ಷಿಣಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ನನಗೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ, ಕೃತಜ್ಞತೆ ಸಲ್ಲಿಸುವೆ. ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರದ ಉಸ್ತುವಾರಿ ನೀಡಿದ್ದಾರೆ. ಮಹಾರಾಷ್ಟ್ರ ಬಹುದೊಡ್ಡ ರಾಜ್ಯವಷ್ಟೇ ಅಲ್ಲ, ರಾಜಕೀಯವಾಗಿ ದೇಶದಲ್ಲೇ ಮಹತ್ವದ ರಾಜ್ಯ. ಮಹಾರಾಷ್ಟ್ರದಲ್ಲಿ ಸಾಕಷ್ಟು ಸವಾಲುಗಳಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನ ಗತವೈಭವ ಸ್ಥಾಪಿಸಲು ಯತ್ನಿಸುವೆ ಎಂದು ತಿಳಿಸಿದರು.drugs-mafia-hk-patil-defended-mla-jameer-ahmed-khan

ಪಕ್ಷ ಗಟ್ಟಿಗೊಳಿಸಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಮಾರ್ಗದರ್ಶನ ನನಗೆ ಇರುತ್ತದೆ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೆಚ್.ಕೆ ಪಾಟೀಲ್ ಹೇಳಿದರು.

ವೀರಪ್ಪ ಮೊಯ್ಲಿಯವರು ಮೊದಲು ನನಗೆ ಮಂತ್ರಿ ಮಾಡಿದರು. ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವನಾಗಿ ಕೆಲಸ ಮಾಡಿದ್ದೆ. ಧರಂಸಿಂಗ್ ಅವರು ಸಿಎಂ ಆಗಿದ್ದಾಗ ಕಾನೂನು ಮಂತ್ರಿಯಾಗಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೆ. ಈಗ ಹೊಸ ಜವಾಬ್ದಾರಿ ನೀಡಿದ್ದಾರೆ ಎಂದು ಹೆಚ್.ಕೆ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.

ನಾನು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಗೆ ಬಂದವನು. ಹಲವು ಸ್ಥಾನಮಾನಗಳನ್ನ ಪಡೆದಿದ್ದೇನೆ. ಮಲ್ಲಿಕಾರ್ಜುನ ಖರ್ಗೆಯವರು ಉಸ್ತುವಾರಿಯಾಗಿದ್ದರು. ಅದರ ಅಡ್ವಾಂಟೇಜ್ ನನಗೆ ಸಿಗಲಿದೆ. ಅವರ ಮಾರ್ಗದರ್ಶನ ನನಗೆ ಸಿಗಲಿದೆ ಎಂದು ಹೆಚ್.ಕೆ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ಡೆತ್ ರೇಟ್ ಬಗ್ಗೆ ಸರ್ಕಾರ ತಿಳಿಸಬೇಕು….

ಬಿಐಇಸಿ ಮುಚ್ಚುವ ಪ್ರಯತ್ನ ಸಂಬಂಧ ನಾನೇ ಮೊದಲ ದೂರುದಾರನಾಗಿದ್ದೇನೆ. ಹ್ಯೂಮನ್ ರೈಟ್ಸ್ ಗಮನ ಬೇರೆಡೆ ಸೆಳೆದಿದ್ದೇನೆ. ಡೆತ್ ರೇಟ್ ಬಗ್ಗೆ ಸರ್ಕಾರ ತಿಳಿಸಬೇಕು. ನ್ಯಾಷನಲ್ ಆವರೇಜ್ ಗಿಂತ ರಾಜ್ಯದ್ದೇ ಹೆಚ್ಚಿದೆ. ಹೀಗಾಗಿ ಸರ್ಕಾರ ಚುರುಕಾಗಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರದ ಅಂಕಿ ಸಂಖ್ಯೆಗಳ ಅಧ್ಯಯನ ಕುತೂಹಲ ಮೂಡಿಸಿದೆ. ಶ್ವಾಸಕೋಶದ ಸಮಸ್ಯೆಗಳಿಂದಲೇ 8.5 ಜನ ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರ ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದೆ ಎಂದು ಹೆಚ್.ಕೆ ಪಾಟೀಲ್ ಟೀಕಿಸಿದರು.

Key words: Drugs Mafia- HK Patil -defended – MLA -Jameer Ahmed Khan.