ಮೈಸೂರು ವಿವಿ ವತಿಯಿಂದ ನಾಳೆ ಸಂವಿಧಾನ ಓದು ರಾಜ್ಯಮಟ್ಟದ ಆನ್ ಲೈನ್ ಕಾರ್ಯಗಾರ

ಮೈಸೂರು, ಸೆಪ್ಟೆಂಬರ್,14,2020(www.justkannada.in) : ರಾಷ್ಟ್ರೀಯ ಸೇವಾ ಯೋಜನಾ ಕೋಶ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಮೈಸೂರು ವಿವಿ ವತಿಯಿಂದ ‘ಸಂವಿಧಾನ ಓದು’ ರಾಜ್ಯಮಟ್ಟದ ಆನ್ ಲೈನ್ ಕಾರ್ಯಗಾರ ಆಯೋಜಿಸಲಾಗಿದೆ.

jk-logo-justkannada-logo

ಮಂಗಳವಾರ(ಸೆ.15ರಂದು) ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ಅತಿಥಿಗಳಾಗಿ ಎನ್.ಎಸ್.ಎಸ್.ಪ್ರಾದೇಶಿಕ ನಿರ್ದೇಶಿಕ ಕೆ.ವಿ.ಖಾದ್ರಿ ನರಸಿಂಹಯ್ಯ, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಕ.ಜಾ.ವಿ.ವಿ.ಗೋಟಗೋಡಿ ಕುಲಸಚಿವ ಪ್ರೊ.ಎನ್.ಎಂ.ಸಾಲಿ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಭಾಗವಹಿಸಲಿದ್ದಾರೆ.

Tomorrow-Mysore Vivi-Read-Constitution-state-level-Online-Worker

ವಿವಿಧ ವಿಷಯಗಳ ಕುರಿತು ಉಪನ್ಯಾಸ

‘ಅಂಬೇಡ್ಕರ್ ಮತ್ತು ಸಂವಿಧಾನ’ ವಿಷಯ ಕುರಿತು ಕೆರೆಕೋಣ ಸಹಯಾನ ಪ್ರಾಧ್ಯಾಪಕ ಡಾ.ವಿಠ್ಠಲ್ ಭಂಡಾರಿ, ‘ಸಂವಿಧಾನ ಆಶಯ ಮತ್ತು ವಿನ್ಯಾಸ’ ವಿಷಯ ಕುರಿತು ಎನ್.ಎಸ್.ಎಸ್.ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಸತೀಶ್ ಗೌಡ.ಎನ್, ‘ಮಹಿಳೆ ಮತ್ತು ಸಂವಿಧಾನ ‘ವಿಷಯ ಕುರಿತು ಸಂವಿಧಾನ ಓದು ಅಭಿಯಾನ ಸಂಚಾಲಕ ಕೆ.ಎಸ್.ವಿಮಲ ಉಪನ್ಯಾಸ ನೀಡಲಿದ್ದಾರೆ.

key words : Tomorrow-Mysore Vivi-Read-Constitution-state-level-Online-Worker